ಜಿಒಸಿಸಿಯಿಂದ 2 ಲಕ್ಷ ರೂ. ದೇಣಿಗೆ

VJP 18-3 NEW
Published on

ವಿಜಯಪುರ: ಸರ್ಕಾರಿ ಸಹಕಾರಿ ಬ್ಯಾಂಕ್ (ಜಿಒಸಿಸಿ)ನಿಂದ ಕರೊನಾ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂ. ದೇಣಿಗೆ ನೀಡಲಾಯಿತು.
ಬ್ಯಾಂಕ್ ಅಧ್ಯಕ್ಷ ಸುರೇಶ ಶೇಡಶ್ಯಾಳ ನೇತೃತ್ವದಲ್ಲಿ ಶನಿವಾರ ಬ್ಯಾಂಕ್ ನಿರ್ದೇಶಕರು ಹಾಗೂ ಸದಸ್ಯರು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮೂಲಕ ಸರ್ಕಾರಕ್ಕೆ ಚೆಕ್ ರವಾನಿಸಿದರು.
ಉಪಾಧ್ಯಕ್ಷ ಸದಾಶಿವ ಭೀಮಪ್ಪ ದಳವಾಯಿ, ನಿರ್ದೇಶಕ ಅರ್ಜುನ ಜಿ. ಲಮಾಣಿ, ಜಯಶ್ರೀ ಸಿದ್ದಪ್ಪ ಬೆಣ್ಣಿ, ಹಣಮಂತ ಬಸಗೊಂಡಪ್ಪ ಕೊಣದಿ, ಅಲ್ಲಾಭಕ್ಷ ಎಂ.ವಾಲಿಕಾರ, ಉಮೇಶ ನಾಗಪ್ಪ ಗುಡ್ನಾಳ, ಅಶೋಕ ವಿಠಲ ಚನಬಸಗೋಳ, ನೀಲಾ ಲಕ್ಷ್ಮಣ ಇಂಗಳೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net