ಸಾಮೂಹಿಕ ಯೋಗದಲ್ಲಿ ವಿಶ್ವ ದಾಖಲೆ

VJP 11-3
Published on

ವಿಜಯಪುರ: ಇಲ್ಲಿನ ಟಕ್ಕೆಯ ಸರ್ಕಾರಿ ಬಾಲಕರ ಬಾಲಮಂದಿರ (ಕಿರಿಯ) ದ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರಿನ ವರ್ತೂರದ ವಿಶ್ವ ಸಾಂಸ್ಕೃತಿಕ ಸಂಭ್ರಮ (ವಿಎಸ್‌ಎಂ) ಯೋಗ ಮಂದಿರದಿಂದ ಫೆ. 2ರಂದು ಆಯೋಜಿಸಿದ್ದ ರಥ ಸಪ್ತಮಿ ಪ್ರಯುಕ್ತ 12 ಗಂಟೆಗಳ ಕಾಲ 108 ಸೂರ್ಯ ನಮಸ್ಕಾರಗಳು ಹಾಗೂ 3ಜಿ ಯೋಗ ಕ್ರಿಯೆಗಳಲ್ಲಿ ಸಾಮೂಹಿಕ ನೋಬೆಲ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ವಿದ್ಯಾರ್ಥಿಗಳಾದ ಅಲ್ಲಪ್ಪ ಮನಗೂಳಿ, ಶಿವರಾಜ ಹೂಗಾರ, ಆಕಾಶ ಪವಾರ, ನಾಗಪ್ಪ ಸಾಲೋಟಗಿ, ಶಿವು ಮಾಹೂರ ಇವರು ಭಾಗವಹಿಸಿ ಪ್ರಮಾಣ ಪತ್ರ ಮತ್ತು ಪದಕವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಬಾಲ ಮಂದಿರದ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net