ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ

hn-30-3
Published on

ವಿಜಯಪುರ: ರಾಜ್ಯದಲ್ಲಿರುವ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸುತ್ತೇವೆ ಎಂದು ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಹೇಳಿದರು.

ವಿಜಯಪುರ ನಗರಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಗೋಂಧಳಿ ಸಮಾಜದ ಮುಖಂಡರ ಮನೆ ಮನೆ ತೆರಳಿ ಸಮಸ್ಯೆಗಳನ್ನು ಆಲಿಸಿ, ಮಾತನಾಡಿ, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಮತ್ತು ವಸತಿ ಯೋಜನೆಯಡಿಯಲ್ಲಿ ಹೆಚ್ಚಿನ ಸೌಲಭ್ಯ ಕೊಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಗೋಂಧಳಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಗರುಡಕರ ಮಾತನಾಡಿ, ಜಿಲ್ಲೆಯಲ್ಲಿ ಅಲೆಮಾರಿ ಜನಾಂಗ ಅತಿ ಕಡು ಬಡವರು ಮತ್ತು ನಿರುದ್ಯೋಗಿಗಳು ಇದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸ್ವಂತ ಉದ್ಯೋಗ ಕೈಗೊಳ್ಳಲು ಸೂರು ಇಲ್ಲದವರಿಗೆ ಸೂರು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಸುರೇಶ್ ಬಿಸೆ, ಯಲ್ಲಪ್ಪ ಘೋರ್ಪಡೆ, ಸಂಜಯ ಕಾಳೆ, ಅಂಬಾಜಿ ಗರುಡಕರ, ಮೋಹನ್ ಬಿಸೆ, ಸಿದ್ದರಾಮ ಬಿಸೆ, ಪರಶುರಾಮ ಕಾಳೆ, ಚಂದ್ರಕಾಂತ್ ಘೋರ್ಪಡೆ, ಶ್ರೀಕೃಷ್ಣ ಸೂರ್ಯವಂಶಿ, ಚಂದ್ರಕಾಂತ್ ಗರುಡಕರ, ಜಿತೇಂದ್ರ ಗರುಡಕರ, ಸುಹಾಸ್ ಬಿಸೆ, ಭಾರತಿ ಸೂರ್ಯವಂಶಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net