ಸರ್ಕಾರಿ ನೌಕರರ ಸಂಘದಿಂದ ಡಿಸಿಗೆ ಮನವಿ

VMS 25-13
Published on

ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕರ ಮುಂಬಡ್ತಿ ಸಮಸ್ಯೆ ಪರಿಹರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಸಿದ್ಧಣ್ಣ ನಂದೂರ ಅಧ್ಯಕ್ಷ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಜ್ಯದ ನಿಲಯ ಮೇಲ್ವಿಚಾರಕರಿಗೆ 35 ವರ್ಷಗಳಿಂದ ಮುಂಬಡ್ತಿ ನೀಡಿಲ್ಲ. ಹೊಸದಾಗಿ ಪರಿಷ್ಕೃತಗೊಂಡ ಸೇವಾ ಮತ್ತು ವೃಂದ ನಿಯಮಾವಳಿಗಳನ್ವಯ ಸೇವಾ ಹಿರಿತನ ಪರಿಗಣಿಸದೆ ಕೇವಲ 2 ರಿಂದ 15 ವರ್ಷ ಸೇವೆ ಸಲ್ಲಿಸಿದವರಿಗೆ ಸ್ವಂತ ವೇತನದ ಮೇಲೆ ಮುಂಬಡ್ತಿ ನೀಡಲಾಗುತ್ತಿದ್ದು, ಸುಧೀರ್ಘ ಸೇವೆ ಸಲ್ಲಿಸಿದವರಿಗೆ ಅನ್ಯಾವಾಗುತ್ತಿದೆ ಎಂದು ಹೇಳಿದರು.
ಹೊಸದಾಗಿ ಪರಿಷ್ಕೃತಗೊಂಡ ಸೇವಾ ಮತ್ತು ವೃಂದ ನಿಯಮಾವಳಿ ಪ್ರಕಾರ ಮುಂಬಡ್ತಿ ಪ್ರಕ್ರಿಯೆ ಶೀಘ್ರದಲ್ಲಿ ತಾವು ಕ್ರಮವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ನಡೆಸುವುದಾಗಿ ಮನವಿ ಸಲ್ಲಿಸಿದರು.
ಆರ್.ಎಸ್. ಭೈರವಾಡಗಿ, ಎಸ್.ಬಿ. ಗಬಸಾವಳಗಿ, ಬಿ.ಎಸ್. ತಳವಾರ, ಎಸ್.ಬಿ. ನಾಯಕ, ಗಂಗಾಬಿಕಾ ಆಲೂರ, ರೇಖಾ ಗುಂಡಳ್ಳಿ, ಬಿ.ಎಸ್. ತಳವಾರ, ಎಸ್.ಬಿ. ನಂದೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net