ಕ್ರೀಡಾಕೂಟದಲ್ಲಿ ಪ್ರಗತಿ ಶಾಲೆ ಮಕ್ಕಳ ಸಾಧನೆ

vijayvapura pragati school sprots
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಪಟ್ಟಣದ ಪ್ರಗತಿ ಆಂಗ್ಲ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ಹೋಬಳಿಮಟ್ಟದ ಕ್ರೀಡಾಕೂಟದಲ್ಲಿ ಹಲವಾರು ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ 6 ತರಗತಿಯ ಎ.ವಿವೇಕ್ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿಪ್ರಥಮ, 7ನೇ ತರಗತಿ ಎಂ.ಆಕಾಶ್ 400 ಮೀಟರ್ ಪ್ರಥಮ, 200 ಮೀಟರ್ ಓಟದಲ್ಲಿ ತೃತೀಯ, ಎನ್.ವಿ.ಹೇಮಂತ್ ಗೌಡ 600 ಮೀಟರ್ ಓಟದಲ್ಲಿ ಪ್ರಥಮ, 400 ಮೀಟರ್ ಓಟದಲ್ಲಿ ದ್ವಿತೀಯ, ಮೊಹಮ್ಮದ್ ಸಾಕಿಬ್- ಎತ್ತರ ಜಿಗಿತದಲ್ಲಿ ಪ್ರಥಮ,100 ಮೀಟರ್ ಓಟದಲ್ಲಿ ತೃತೀಯ, ಆರ್.ಕೆ.ಹರ್ಷ 600 ಮೀಟರ್ ಓಟದಲ್ಲಿ ದ್ವಿತೀಯ, ಗೋವರ್ಧನ್ 80 ಮೀಟರ್ ಹರ್ಡಲ್ಸ್‌ನಲ್ಲಿ ದ್ವಿತೀಯ, ರಕ್ಷಿತ್ 80 ಮೀಟರ್ ಹರ್ಡಲ್ಸ್‌ನಲ್ಲಿ ತೃತೀಯ, 6ನೇ ತರಗತಿ ಗುಣವ್- ಉದ್ದ ಜಿಗಿತ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ರಿಲೇ ವಿಭಾಗದಲ್ಲಿ ವಿವೇಕ್ ಮತ್ತು ತಂಡ 4/100 ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ 7ನೇ ತರಗತಿ ಪಾವನಿ - ಉದ್ದ ಜಿಗಿತ, ಗುಂಡು ಎಸೆತ ಹಾಗೂ ಮತ್ತು ಚಕ್ರ ಎಸೆತದಲ್ಲಿ ಪ್ರಥಮ, ಶ್ರೇಯಶ್ರೀ 200 ಮೀಟರ್ ಓಟದಲ್ಲಿ ಪ್ರಥಮ, 100 ಮೀಟರ್ ಓಟ ಮತ್ತು ಎತ್ತರ ಜಿಗಿತದಲ್ಲಿ ದ್ವಿತೀಯ, 6ನೇ ತರಗತಿಯ ಎಸ್.ಸಿಂಚಸಾ 400 ಮೀಟರ್ ಮತ್ತು 600 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಾಲಕಿಯರ ಗುಂಪು ಆಟದಲ್ಲಿ ಪಾವನಿ ಮತ್ತು ತಂಡ ವಾಲಿಬಾಲ್ ಪ್ರಥಮ, ಎಂ. ವರ್ಷಿಣಿ ಮತ್ತು ತಂಡ ಥ್ರೋಬಾಲ್‌ನಲ್ಲಿ ಪ್ರಥಮ, ಕೆ.ಸಿ.ಪ್ರಣತಿ ಮತ್ತು ತಂಡ ಖೋ ಖೋದಲ್ಲಿ ದ್ವಿತೀಯ ಹಾಗೂ ಬಾಲಕರ ಗುಂಪು ಆಟದಲ್ಲಿ ಆರ್.ಕೆ.ಹರ್ಷ ಮತ್ತು ತಂಡ ವಾಲಿಬಾಲ್ ಪ್ರಥಮ ಸ್ಥಾನ, ಎ. ವಿವೇಕ್ ಮತ್ತು ತಂಡ ಥ್ರೋಬಾಲ್ ಪ್ರಥಮ ಸ್ಥಾನ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net