ಬ್ಯಾಂಕ್ ಸಿಬ್ಬಂದಿಗೆ ಸಂಗೀತದ ರಸದೌತಣ

VMS 20-4
Published on

ವಿಜಯಪುರ: ಕಲೆ, ಸಾಹಿತ್ಯ ಹಾಗೂ ಸಂಗೀತದಂಥ ವಿಷಯಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಬ್ಯಾಂಕ್ ಸಿಬ್ಬಂದಿ ದೈನಂದಿನ ಕೆಲಸದಿಂದ ಕೊಂಚಮಟ್ಟಿಗೆ ಮುಕ್ತಿ ಪಡೆಯಲೆಂದು ಈ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಹರ್ಷ ಪಾಟೀಲ ಹೇಳಿದರು.
ನಗರದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸಿಬ್ಬಂದಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಗಾಯಕ ಪುತ್ತೂರು ನರಸಿಂಹನಾಯಕ ಅವರ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪುತ್ತೂರು ನರಸಿಂಹನಾಯಕ ಅವರು, ‘ದಾಸನಾಗು ವಿಶೇಷನಾಗು, ಪವಮಾನ, ಭಾಗ್ಯದ ಲಕ್ಷ್ಮಿ ಬಾರಮ್ಮ ದಾಸವಾಣಿ ಸೇರಿದ ಜನರಿಗೆ ಕರ್ಣಾನಂದ ನೀಡಿದವು. ಕುಟುಂಬ ಸಮೇತರಾಗಿ ಆಗಮಿಸಿದ್ದ ಸಿಬ್ಬಂದಿ ದಾಸವಾಣಿಗೆ ತಲೆದೂಗಿದರು. ಕೆಲ ಹಾಡುಗಳನ್ನು ಮತ್ತೆ ಮತ್ತೆ ಹೇಳುವಂತೆ ಮನವಿ ಮಾಡಿಕೊಂಡರು.
ಬ್ಯಾಂಕ್ ಉಪಾಧ್ಯಕ್ಷ ರಮೇಶ ಬಿದನೂರ ಮಾತನಾಡಿದರು. ನಿರ್ದೇಶಕರಾದ ವಿ.ಡಿ. ಇಜೇರಿ, ವಿ.ಡಿ. ಕರ್ಪೂರಮಠ, ಎಸ್.ಎಂ. ಹುಂಡೆಕಾರ, ಎಸ್.ಎಸ್. ಪಾಟೀಲ (ತೊನಶ್ಯಾಳ), ವಿ.ಎಸ್. ಪಾಟೀಲ (ಮಸಬಿನಾಳ), ಎನ್.ಆರ್. ಪಾಟೀಲ (ಮುಳವಾಡ), ಎಸ್. ಎಸ್. ಭೋಗಶೆಟ್ಟಿ ಹಾಗೂ ಪುತ್ತೂರು ನರಸಿಂಹನಾಯಕರ ಅಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net