ಆರೋಗ್ಯ ಜಾಗೃತಿಗಾಗಿ ಮ್ಯಾರಾಥಾನ್

VJP 29-1
Published on

ವಿಜಯಪುರ: ವಿಶ್ವ ಹೃದಯ ದಿನಾಚರಣೆ ನಿಮಿತ್ತ ಜಿಲ್ಲಾ ಪ್ರಯೋಗಾಲಯ ತಂತ್ರಜ್ಞರ ಸಂಘದಿಂದ ಆರೋಗ್ಯ ಜಾಗೃತಿ ಕುರಿತು ಮಂಗಳವಾರ ಮ್ಯಾರಾಥಾನ್ ನಡೆಯಿತು.
ನಗರದ ಸಿದ್ಧೇಶ್ವರ ದೇವಸ್ಥಾನ ಮುಂಭಾಗ ಡಾ.ರಾಜೇಶ ಎಂ. ಹೊನ್ನುಟಗಿ ಹಾಗೂ ಡಾ. ಗೌತಮ ವಗ್ಗಾರ ಮ್ಯಾರಾಥಾನ್‌ಗೆ ಚಾಲನೆ ನೀಡಿ, ಕರೊನಾ ಮಹಾಮಾರಿ ಜಗತ್ತನ್ನೇ ಆವರಿಸಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಮುಂಜಾಗ್ರತೆ ವಹಿಸಬೇಕು. ಜತೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ಪ್ರತಿ ದಿನ ವ್ಯಾಯಾಮ ಹಾಗೂ ನಡಿಗೆ ಆರಂಭಿಸಬೇಕೆಂದರು.
ಪತ್ರಕರ್ತ ಸಂಗಮೇಶ ಚೂರಿ, ಜಿಲ್ಲಾ ಪ್ರಯೋಗಾಲಯ ತಂತ್ರಜ್ಞರ ಸಂಘದ ಅಧ್ಯಕ್ಷ ಶ್ರೀಕಾಂತ ಎಚ್. ಚಿಮ್ಮಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆ ಉಪಾಧ್ಯಕ್ಷ ಅರುಣ ಮನಗೂಳಿ, ಕಾಂತು ಭೋಸಲೆ, ಬಸು ರೇವಡಿಹಾಳ, ಸುನೀಲ ಹೇರಲಗಿ, ಮಹಾಂತೇಶ ಹುಲ್ಲೂರ, ರಂಗಾಚಾರಿ ಜಹಾಗೀರದಾರ, ವಿಜು ಬೋಸಲೆ, ಅಶೋಕ ಕಾಶೆಟ್ಟಿ, ಬಿ.ಎಸ್. ಮಠ, ಸುನೀಲ ಚವಾಣ್, ಮಹೇಶ ಕಟಾಯಿ, ಸಿದ್ದು ಕರಿಗೌಡರ, ಸಿದ್ದು ಕುಬಕಡ್ಡಿ, ಮಲ್ಲು ಕಲಾದಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net