ಏಕಾಗ್ರತೆಯಿಂದ ಯಶಸ್ಸು ಸಾಧ್ಯ

VMS 22-9
Published on

ವಿಜಯಪುರ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಏಕಾಗ್ರತೆ ಹಾಗೂ ಛಲ ಅತ್ಯಗತ್ಯ. ಏಕಾಗ್ರತೆಯಿಂದ ಓದಿದಲ್ಲಿ ಯಶಸ್ಸು ಸಾಧ್ಯ. ಓದಿದ್ದನ್ನು ನೆನಪಿನಲ್ಲಿಟ್ಟಿಕೊಳ್ಳುವುದು ಅವಶ್ಯಕ ಎಂದು ಚಂದನ ವಾಹಿನಿಯ ‘ಥಟ್ ಅಂತ ಹೇಳಿ‘ ಖ್ಯಾತಿಯ ಡಾ.ನಾ. ಸೋಮೇಶ್ವರ ಹೇಳಿದರು.
ನಗರದ ಸಿದ್ಧೇಶ್ವರ ಕಲಾಭವನದಲ್ಲಿ ಚಾಣಕ್ಯ ಕರಿಯರ್ ಅಕಾಡಮಿ ತರಬೇತಿ ವಿದ್ಯಾರ್ಥಿಗಳಿಗಾಗಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಂದರ ಬದುಕು, ಬರಹ, ಚಿಂತನೆ, ಆಹಾರ, ಸಂಸ್ಕೃತಿ ಹಾಗೂ ಇತಿಹಾಸದ ಕುರಿತು ಅವರು ಮಾತನಾಡಿದರು.
ಸಮಾರಂಭದಲ್ಲಿ ಡಾ.ನಾ.ಸೋಮೇಶ್ವರ ರಚಿಸಿದ ‘ಕಲಿಕೆ ಓದು ನೆನಪು’ ಹಾಗೂ ‘ಸ್ವಚ್ಛಮೇವ ಜಯತೆ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ವಿ.ವಿ. ಮಳಗಿ, ಸದಾಶಿವ ಹಿರೇಮಠ, ನಿವೃತ್ತ ತಹಸೀಲ್ದಾರ್ ಜಿ.ಆರ್. ಶೀಲವಂತ ಆಗಮಿಸಿದ್ದರು. ಚಾಣಕ್ಯ ಕರಿಯರ್ ಅಕಾಡಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಚಾಣಕ್ಯ ಕರಿಯರ್ ಅಕಾಡಮಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net