

ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ, ಶ್ರೀ ಸಿದ್ಧೇಶ್ವರ ಸಂಸ್ಥೆ ಹಾಗೂ ದಾನಮ್ಮದೇವಿ ಪ್ರಸಾದ ಸೇವಾ ಸಮಿತಿ ನೇತೃತ್ವದಲ್ಲಿ ಶನಿವಾರ ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ ಆಚರಿಸಲಾಯಿತು.
ತಡವಲಗ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಚಾಲನೆ ನೀಡಿ, ಪೂಜ್ಯರು ಮಾಡಿದ ಅನೇಕ ಧರ್ಮಾಚರಣೆ, ಸಾಮಾಜಿಕ ಕಾರ್ಯಗಳು, ಅನೇಕ ಮಹನೀಯರ ದಿನಾಚರಣೆ ನೆನಪುಗಳು ಒಂದೇ ಜಾತಿಗೆ ಸೀಮಿತವಾಗಬಾರದು. ಅವರು ಮಾಡಿದ ಸಾಧನೆಗಳ ಬಗ್ಗೆ ಜನಕ್ಕೆ ಮುಟ್ಟುವ ಹಾಗೂ ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆದುಕೊಂಡು ಹೋಗಬೇಕು ಎಂದು ಶ್ರೀಗಳು ಹೇಳಿದರು.
ಇದೇ ವೇಳೆ ಪೇಜಾವರ ಶ್ರೀಗಳು, ಕನ್ನೊಳ್ಳಿ ಶ್ರೀಗಳು ಹಾಗೂ ಶ್ರೀಶೈಲ ಗಚ್ಚಿನಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಾಹಿತಿ ಬಿ.ಎಂ. ಪಾಟೀಲ, ಮುಖಂಡರಾದ ಗುರು ಗಚ್ಚಿನಮಠ, ಮಹೇಶ ಬಿದನೂರ, ಪ್ರೇಮಾನಂದ ಹತ್ತಿ, ಪ್ರಸಾದ ಯಡಹಳ್ಳಿ, ಪ್ರಕಾಶ ಮಲ್ನಾಡ, ಆನಂದ ಮದಭಾವಿ, ಪ್ರವೀಣ ದೇಸಾಯಿ, ಗಂಗಾಧರ ಸರತಿಮಠ, ಮಹಾದೇವ ವಿಭೂತಿಮಠ, ಈರಯ್ಯ ಹಿರೇಮಠ, ಸೋಮು ಅಂಗಡಿ, ರವಿ ವಾಲಿ, ಆನಂದ ಸಿಂದಗಿ, ಬಾಗಪ್ಪ ಕನ್ನೊಳ್ಳಿ, ಸಿದ್ಧರಾಮೇಶ್ವರ ಹಿರೇಮಠ, ಪ್ರಕಾಶ ಹಂಗರಗಿ, ಶರಣಪ್ಪ ಕೊರಳ್ಳಿ, ದಯಾನಂದ ನಿಕ್ಕಂ, ಸೋಮು ಹಿರೇಮಠ, ಚಿದಾನಂದ ಹಿರೇಮಠ, ಸಚಿನ ಬೂದಿಹಾಳಮಠ, ಸದಾನಂದ ಪೂಜಾರಿ, ಅಶೋಕ ತಿಮಶೆಟ್ಟಿ ಇನ್ನಿತರರಿದ್ದರು.