ವೆಂಕಟೇಶ ದೇವರಿಗೆ ಕಿರೀಟ ಸಮರ್ಪಣೆ

VJP 17-3
Published on

ವಿಜಯಪುರ: ನಗರದ ತೊರವಿ ರಸ್ತೆಯಲ್ಲಿರುವ ವಿಷ್ಣು ಸಹಸ್ರ ನಾಮ ಭವನದ ಶ್ರೀ ವೆಂಕಟೇಶ ದೇವರ ಸನ್ನಿಧಾನದಲ್ಲಿ ಮಂಗಳವಾರ ದೀಪಾವಳಿಯ ಪ್ರತಿಪದೆ ನಿಮಿತ್ತ ದೇವರಿಗೆ ಕಿರೀಟ ಸಮರ್ಪಣೆ ಮಾಡಲಾಯಿತು.

ಪಂಡಿತ ಮಧ್ವಾಚಾರ್ಯ ಮೊಖಾಶಿಯವರು ಮಹಿಪತಿ ಜೋಶಿ ಮತ್ತು ಸತೀಶ ಕುಲಕರ್ಣಿ ಸೇವಾ ರೂಪದಲ್ಲಿ ಸಲ್ಲಿಸಿದ ಕಿರೀಟವನ್ನು ಶ್ರೀ ವೆಂಕಟೇಶ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿ ಅರ್ಪಣೆ ಮಾಡಿದರು.

ಬಲಿಪಾಡ್ಯೆ ಸುದಿನದಂದು ಭಗವಂತನ ಅಲಂಕಾರ ವಿಶೇಷವಾಗಿತ್ತು. ವ್ಯಾಸ ಮಧ್ವ ಸಂಸ್ಕೃತ ವಿದ್ಯಾಲಯದ ಪಂ.ವೇದನಿಧಿ ಆಚಾರ್ಯರು, ಪಂ.ಸತ್ಯವರ ಆಚಾರ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅನೇಕ ಜರು, ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net