ರಾಮರಾವ ಮಹಾರಾಜರ ಕಾರ್ಯ ಶ್ಲಾಘನೀಯ

HN 5-2
Published on

ವಿಜಯಪುರ: ನಗರದ ಶಿವಾಜಿ ಮಹಾರಾಜರ ವೃತ್ತದಲ್ಲಿ ಛತ್ರಪತಿ ಶಿವಾಜಿ ೌಂಡೇಷನ್ ವತಿಯಿಂದ ಬಂಜಾರ ಸಮಾಜದ ಗುರು ಸಂತ ಶ್ರೀ ರಾಮರಾವ ಮಹಾರಾಜ ಅವರಿಗೆ ಗುರುವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಂಘಟನೆ ಮುಖಂಡ ಕಿರಣ ಕಾಳೆ ಮಾತನಾಡಿ, ರಾಮರಾವ ಮಹಾರಾಜರು ಬರೀ ಬಂಜಾರ ಸಮುದಾಯದ ಗುರುಗಳಲ್ಲದೆ ಸಮಸ್ತ ಹಿಂದು ಸಮಾಜದ ಗುರುಗಳಾಗಿದ್ದರು ಎಂದು ಹೇಳಿದರು.

ಮುಖಂಡ ಪ್ರಭಾಕರ ಭೋಸಲೆ ಮಾತನಾಡಿ, ಶ್ರೀಸಂತ ಸೇವಾಲಾಲ ಮಹಾರಾಜರ ವಂಶಸ್ಥರಾದ ಸಂತ ರಾಮರಾವ ಮಹಾರಾಜರು ಮಾಡಿದ ಸಮಾಜ ಸೇವಾ ಕಾರ್ಯಗಳು ಶ್ಲಾಘನೀಯವಾಗಿದೆ. ರಾಮರಾವ ಮಹಾರಾಜರು ಸಮಸ್ತ ಭಾರತೀಯರಿಗೆ ಪ್ರೇರಣೆಯಾಗಿದ್ದರು ಎಂದರು.

ಬಂಜಾರ ಸಮುದಾಯದ ಶ್ರೀ ಗೋಪಾಲ ಮಹಾರಾಜರು, ಪಾಲಿಕೆ ಮಾಜಿ ಸದಸ್ಯ ರಾಹುಲ್ ಜಾಧವ, ಮುಖಂಡರಾದ ಲಕ್ಷ್ಮೀ ಸೊನ್ನದ, ಅರವಿಂದ ಲಮಾಣಿ, ಆನಂದ ಶಿವಣಗಿ, ಧನಂಜಯ ನಿಮಗ್ರೆ, ಹರೀಶ ಜೋಶಿ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net