ರಾಷ್ಟ್ರೀಯ ಕ್ರೀಡಾ ದಿನ ಆಚರಣೆ

VJP 29-1
Published on

ವಿಜಯಪುರ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ದೇಶಪ್ರೇಮಿ ಕ್ರೀಡಾ ಸಾಧಕ ಮೇಜರ್ ಧ್ಯಾನಚಂದರವರ ಹುಟ್ಟುಹಬ್ಬದ ನಿಮಿತ್ತ ರಾಷ್ಟ್ರೀಯ ಕ್ರೀಡಾದಿನವನ್ನು ಶನಿವಾರ ಆಚರಿಸಲಾಯಿತು.
ಪ್ರಾಂಶುಪಾಲ ಶ್ರೀಧರ ಕರಬೇಟ ಅವರು ಧ್ಯಾನಚಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಯಾರು ಕ್ರೀಡೆಯಲ್ಲಿ ತೊಡಗಿಕೊಂಡಿರುತ್ತಾರೋ ಅವರು ಆರೋಗ್ಯದಿಂದ ಇರುತ್ತಾರೆ. ಆರೋಗ್ಯವಿದ್ದ ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಸದೃಡನಾಗಿರುತ್ತಾನೆ. ಅದಕ್ಕಾಗಿ ಎಲ್ಲರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಕೊಂಡಿರಬೇಕು ಎಂದರು.
ದೈಹಿಕ ಶಿಕ್ಷಕ ಎ.ಎಚ್. ಸಗರ, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಇಲಿಯಾಸ್, ಭಾರತಿ ಪಾಟೀಲ, ಮಧುಮತಿ ಪಡತಾರೆ, ತಬಸ್ಸುಮ್, ಹಫೀಜ್ ಹುಬ್ಬಳ್ಳಿ, ಸರೋಜಾ ಕರ್ಕಳಿ, ದೀಪಾ ತಿಳಿಗೋಳ, ಮಿನಾಕ್ಷಿ ಹಿಪ್ಪರಗಿ, ಸವಿತಾ ಪಾಟೀಲ, ಸವಿತಾ ನರಸಲಗಿ, ಸಿದ್ದು ತೊರವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net