ಕರೊನಾ ತೊಲಗಿಸಲು ಕಂಕಣಬದ್ಧರಾಗೋಣ

VJP 29-2
Published on

ವಿಜಯಪುರ: ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕರೊನಾ ತಡೆಗೆ ಕಂಕಣಬದ್ಧರಾಗೋಣ ಎಂದು ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಹೇಳಿದರು.
ನಗರದ ವಾರ್ಡ್ ನಂ-13 ಸಂಜಯ ಗಾಂಧಿ ನಗರದ ಶ್ಯಾಪೇಟಿಯಲ್ಲಿ ಮಂಗಳವಾರ ಆರೋಗ್ಯ ಹಸ್ತ ಕಾರ್ಯಕ್ರಮದಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ದಿನೇ ದಿನೆ ಕರೊನಾ ಹೆಚ್ಚುತ್ತಿದೆ. ರಾಜ್ಯವೂ ಇದರಿಂದ ಹೊರತಾಗಿಲ್ಲ. ಸರ್ಕಾರ ಮಾತ್ರ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಜನರ ಮನೆ ಬಾಗಿಲಿಗೆ ಧಾವಿಸಿದೆ ಎಂದರು.
ಮುಖಂಡ ಯಾಜ ಕಲಾದಗಿ ಮಾತನಾಡಿ, ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜನ ಕಾಂಗ್ರೆಸ್ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ ಎಂದರು.
ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ನಗರದಲ್ಲಿ ಕರೊನಾ ಹತೋಟಿಗೆ ತರಲು ಶ್ರಮಿಸಲಾಗುತ್ತಿದೆ. ಆತ್ಮವಿಶ್ವಾಸದಿಂದ ರೋಗ ಎದುರಿಸೋಣ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಮಿಲಿಂದ ಚಂಚಲಕರ ಹಾಗೂ ಬಿಡಿಎ ಮಾಜಿ ಅಧ್ಯಕ್ಷ ಆಝಾದ ಪಟೇಲ ಮಾತನಾಡಿದರು.
ಮುಖಂಡರಾದ ಅಬ್ದುಲ್ ರಜಾಕ್ ಹೊರ್ತಿ, ಯಾಜ ಕಲಾದಗಿ, ಜಮೀರ್ ಭಕ್ಷಿ, ಆರತಿ ಶಹಾಪುರ, ರಜಾಕ್ ಕಾಖಂಡಕಿ, ಮಹಿಬೂಬ್ ಹೊನ್ನುಟಗಿ, ನೂರ ಹೊನ್ನುಟಗಿ, ಲತೀಫ್ ಕಲಾದಗಿ, ಅಮೀನಸಾಬ ಅಗಸಿಮನಿ, ವಸಂತ ಹೊನಮೋಡೆ, ನಸೀಮ್ ರೋಜಿಂದಾರ, ಶಫೀಕ ಪಟೇಲ್, ಜಬ್ಬಾರ್ ಕಲಾದಗಿ, ಐ.ಸಿ.ಪಠಾಣ, ಜಯಶ್ರೀ ಭರಾಟೆ, ತಾಜೋದ್ದೀನ್ ಖಲೀಪಾ, ಪರ್ವೇಜ್ ಕಲಾದಗಿ, ಫಿದಾ ಕಲಾದಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net