

ವಿಜಯಪುರ: ಜಾನಪದ ಎಲ್ಲ ಸಾಹಿತ್ಯಗಳ ತಾಯಿ ಬೇರು. ಅಂಥ ಶ್ರೇಷ್ಠ ಜಾನಪದ ಸಾಹಿತ್ಯದ ಉಳಿವಿಗೆ ನಾವೆಲ್ಲರೂ ಶ್ರಮಿಸೋಣ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಎನ್. ಪಾಟೀಲ ಹೇಳಿದರು.
ಇಲ್ಲಿನ ಬವಿವ ಸಂಸ್ಥೆಯ ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2021ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‌ಎಸ್‌ಎಸ್ ಚಟುವಟಿಕೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಂತಿ ಪದ, ಗೀಗೀ ಪದ, ಲಾವಣಿ ಪದ, ವಚನಗಳನ್ನು ಮೈಗೂಡಿಸಿಕೊಂಡು ಮಾದರಿ ವಿದ್ಯಾರ್ಥಿ ಜೀವನವನ್ನು ಕಳೆಯಬೇಕಾಗಿದೆ. ವಿದ್ಯಾರ್ಥಿಗಳು ಶಾಲೆ ಜೀವನದಲ್ಲಿ ಕಲಿತ ಪಾಠವೇ ಅವರ ಮುಂದಿನ ಜೀವನದ ಗುರಿಯಾಗುತ್ತದೆ. ಇಂದಿನ ಯುವ ಪೀಳಿಗೆ ಜಾಗತಿಕ ಜಾಲತಾಣಗಳಿಗೆ ಮೊರೆ ಹೋಗುತ್ತಿದ್ದು, ಜಾನಪದ ಕಲೆ, ಸಂಸ್ಕೃತಿಯನ್ನು ಮರೆಯುತ್ತಿರುವುದು ಆತಂಕಕಾರಿ ವಿಷಯ ಎಂದರು.
ಪ್ರಾಚಾರ್ಯ ಡಾ.ಎಸ್.ಟಿ. ಬೋಳರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಬಿ.ಎಸ್. ಬಾಪಗೊಂಡ, ಎಸ್.ಡಿ. ಬೋಳರೆಡ್ಡಿ, ಪ್ರೊ.ಓಂಕಾರ ನಾವಿ, ಕೆ.ಎಸ್. ಆಲಮೇಲ, ಎಂ.ಎಸ್. ತೋಟಗೇರ, ಪ್ರೊ. ಪಿ.ಡಿ. ಮುಲ್ತಾನಿ, ಪ್ರೊ. ಎಂ.ಆರ್. ಬಿರಾದಾರ, ಪ್ರೊ. ಎಸ್.ಬಿ. ಮಠಪತಿ, ಪ್ರೊ. ಜಿ.ಆರ್. ಮದರಿ, ಪ್ರೊ.ಎಸ್.ಜಿ. ರೆಬಿನಾಳ, ಪ್ರೊ. ಪಿ.ಡಿ. ಮಹೇಂದ್ರಕರ, ಪ್ರೊ. ಎನ್.ಕೆ. ಕುಂಬಾರ, ಪ್ರೊ.ಆನಂದ ಜಿರ್ಲೆ, ಪ್ರೊ. ವಿರೇಶ ವಾಲಿ, ಪ್ರೊ. ಪದ್ಮಾಜಾ ಕುಲಕರ್ಣಿ ಉಪಸ್ಥಿತರಿದ್ದರು.