ದಾಂಪತ್ಯ ಜೀವನಕ್ಕೆ ಕಾಲಿಟ್ಟ 41 ಜೋಡಿಗಳು

vjp Jatre
Published on

ವಿಜಯಪುರ: ತಾಲೂಕಿನ ಕತಕನಹಳ್ಳಿಯ ಗುರುಚಕ್ರವರ್ತಿ ಸದಾಶಿವ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹದಲ್ಲಿ 41 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಶಿವಯ್ಯ ಸ್ವಾಮಿಗಳು ಮಾತನಾಡಿ, ಶುದ್ಧ ಕಾಯಕ ಮಾಡಿ ಜೀವನ ನಡೆಸಬೇಕು, ಹಿರಿಯರ ಮಾರ್ಗದರ್ಶನ ಪಡೆಯಬೇಕು, ಸತಿ-ಪತಿಗಳು ಶರೀರ ಎರಡಾದರೂ ಹೃದಯ ಒಂದೇ ಎಂಬ ಭಾವದಿಂದ ಜೀವಿಸಬೇಕು ಎಂದು ದಂಪತಿಗೆ ತಿಳಿಸಿದರು.

ಆಶೀರ್ವಚನ ನೀಡಿದ ಅಗಡಿಯ ಆನಂದವನದ ಶಂಕರ ಭಟ್ ಜೋಶಿ, ಹೆಣ್ಣು ಮಗಳಿಗೆ ಜನ್ಮತಾಳಿದ ಮನೆ ಒಂದಾದರೆ, ಪಡೆದ ಮನೆ ಇನ್ನೊಂದು, ಅದನ್ನು ಅರಿತು ಎಲ್ಲರೂ ನನ್ನವರೆಂದು ಬದುಕನ್ನು ಕಟ್ಟಿಕೊಂಡು ಎರಡು ಮನೆತನದ ಕೀರ್ತಿಯನ್ನು ತರುತ್ತಾಳೆ ಎಂದರು.

ಜಾತ್ರೋತ್ಸವದ ಪ್ರಯುಕ್ತ ರೈತಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು ಅರ್ಥಪೂರ್ಣ ಎಂದರು. ಬಸಯ್ಯ ಗಚ್ಚಿನಮಠ ಮಾತನಾಡಿದರು. ವಿವಿಧ ಮಠಾಧೀಶರು ಹಾಗೂ ಧುರೀಣರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net