

ವಿಜಯಪುರ: ತಾಲೂಕಿನ ವಿವಿಧ ದೇವಾಲಯಗಳಿಗೆ ಜಲಸಂನ್ಮೂಲ ಸಚಿವ ಗೋವಿಂದ ಕಾರಜೋಳ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ತಿಳಿಸಿದ್ದಾರೆ.
ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ಲಗಮವ್ವ ದೇವಾಲಯಕ್ಕೆ 3 ಲಕ್ಷ ರೂ., ಮಾತಂಗಿ ದೇವಾಲಯಕ್ಕೆ 2 ಲಕ್ಷ ರೂ., ಶಿರಾಡೋಣ ಗ್ರಾಮದ ಮಹಾದೇವ ದೇವಾಲಯಕ್ಕೆ 5 ಲಕ್ಷ ರೂ., ದಸೂರ ಗ್ರಾಮದ ಚಾಮುಂಡಿ ದೇವಾಲಯಕ್ಕೆ 3 ಲಕ್ಷ ರೂ., ಜೇರಂಕಲಗಿಯ ಶ್ರೀಗುರು ರಾಘವೇಂದ್ರ ಮಠದ ದೇವಾಲಯಕ್ಕೆ 5 ಲಕ್ಷ ರೂ., ಗೋಡಿಹಾಳದ ಶ್ರೀಬಿಸಲ ಸಿದ್ದೇಶ್ವರ ದೇವಾಲಯಕ್ಕೆ 3 ಲಕ್ಷ ರೂ., ಶಿರನಾಳದ ಪಾಂಡುರಂಗ ದೇವಾಲಯಕ್ಕೆ 5 ಲಕ್ಷ ರೂ., ಕಾತ್ರಾಳದ ಮಲ್ಲಿಕಾರ್ಜುನ ದೇವಾಲಯಕ್ಕೆ 5 ಲಕ್ಷ ರೂ., ದಸೂರದ ಗಣಪತಿ ದೇವಾಲಯಕ್ಕೆ 2 ಲಕ್ಷ ರೂ., ದೇವರನಿಂಬರಗಿಯ ಮರಗಮ್ಮ ದೇವಾಲಯಕ್ಕೆ 3 ಲಕ್ಷ ರೂ., ಹಲಸಂಗಿ ಅಮೃತೇಶ್ವರ ದೇವಾಲಯಕ್ಕೆ 10 ಲಕ್ಷ ರೂ., ಶಿರನಾಳದ ಶ್ರೀ ದಿಗಂಬರೇಶ್ವರ ದೇವಾಲಯಕ್ಕೆ 10 ಲಕ್ಷ ರೂ., ಹಲಸಂಗಿಯ ಪ್ರಭುಲಿಂಗೇಶ್ವರ ದೇವಾಲಯಕ್ಕೆ 2 ಲಕ್ಷ ರೂ., ಲೋಣಿ ಬಿ.ಕೆ. ಗ್ರಾಮದ ಸಿದ್ಧಿ ವಿನಾಯಕ ದೇವಾಲಯಕ್ಕೆ 2 ಲಕ್ಷ ರೂ., ಕಾತ್ರಾಳದ ಮಲ್ಲಿಕಾರ್ಜುನ ದೇವಾಲಯಕ್ಕೆ 5 ಲಕ್ಷ ರೂ., ಬರಡೋಲದ ಶ್ರೀ ಚಿದಂಬರ ದೇವಾಲಯಕ್ಕೆ 5 ಲಕ್ಷ ರೂ., ಶಿರನಾಳದ ಹನುಮಾನ ದೇವಾಲಯಕ್ಕೆ 5 ಲಕ್ಷ ರೂ., ತಿಡಗುಂದಿಯ ಹನುಮಾನ ದೇವಾಲಯಕ್ಕೆ 10 ಲಕ್ಷ ರೂ., ಡೋಮನಾಳದ ಮಲ್ಲಿಕಾರ್ಜುನ ದೇವಾಲಯಕ್ಕೆ 5 ಲಕ್ಷ ರೂ., ಖತಿಜಾಪೂರದ ಲಕ್ಷ್ಮಿ ದೇವಾಲಯಕ್ಕೆ 5 ಲಕ್ಷ ರೂ., ಯೋಗಾಪೂರ ಬಡಾವಣೆ, ಓಂ ಸಾಯಿ ಗಜಾನನ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 3 ಲಕ್ಷ ರೂ., ಬ್ಯಾಂಕರ್ಸ್ ಕಾಲನಿ ಮರಗಮ್ಮ ದೇವಾಲಯದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 3 ಲಕ್ಷ ರೂ., ಶಾಂತಿನಿಕೇತನ ಶಾಲೆ ಬಳಿ ಇರುವ ಲಕ್ಷ್ಮಿ ದೇವಿ ದೇವಾಲಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ 3 ಲಕ್ಷ ರೂ., ಜುಮನಾಳ ಗ್ರಾಮದ ಹುಲಿಗೆಮ್ಮ ದೇವಾಳಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 3 ಲಕ್ಷ ರೂ, ಹೊನ್ನುಟಗಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 3 ಲಕ್ಷ ರೂ., ಹೊನ್ನುಟಗಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ., ಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಜಡೆಯ ಶಾಂತಲಿಂಗೇಶ್ವರ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ., ಬೊಮ್ಮನಹಳ್ಳಿ ಗವಿಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ., ಕನ್ನಾಳ ಗ್ರಾಮದ ಭೀಮಾಶಂಕರ ಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಹಾಗೂ ಗುಣಕಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಮುಂಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ., ಶಿವಣಗಿಯ ಮಾದಾರ ಓಣಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ., ಮದಭಾವಿ ಗ್ರಾಮದಲ್ಲಿ ಭೋವಿ ಸಮಾಜದ ದುರ್ಗಾದೇವಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ., ಹಡಗಲಿ ಗ್ರಾಮದಲ್ಲಿ ಹರಿಜನಕೇರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ., ಕವಲಗಿ ಗ್ರಾಮದಲ್ಲಿ ಮಾದರ ಓಣಿಯಲ್ಲಿ ಮರಗಮ್ಮ ದೇವಾಲಯ ನಿರ್ಮಾಣಕ್ಕೆ 5 ಲಕ್ಷ ರೂ., ಐನಾಪೂರ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ., ನಾಗಠಾಣ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ., ಹೆಗಡಿಹಾಳ ಗ್ರಾಮದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ 5 ಲಕ್ಷ ರೂ., ಜುಮನಾಳ ಗ್ರಾಮದ ಮಾದಾರ ಕಾಲನಿಯಲ್ಲಿರುವ ಮಹಾಲಕ್ಷ್ಮಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.