ವಿಜಯಪುರದಲ್ಲಿ ರಾಮರಾಜ್ ಶೋ ರೂಂ ಉದ್ಘಾಟನೆ

VMS NEWS 20-1
Published on

ವಿಜಯಪುರ: ಗುಮ್ಮಟನಗರಿಯಲ್ಲಿ ಎಲ್ಲವೂ ದೊರೆಯುತ್ತಿತ್ತು. ಆದರೆ, ಗುಣಮಟ್ಟದ ಪಂಚೆ, ಶರ್ಟ್ ಹಾಗೂ ಒಳ ಉಡುಪುಗಳಿಗೆ ಹೆಸರಾದ ರಾಮರಾಜ್ ಟೆಕ್ಸ್‌ಟೈಲ್ಸ್ ಖರೀದಿಸಲು ಬೇರೆ ಊರುಗಳಿಗೆ ಹೋಗಬೇಕಿತ್ತು. ರಾಮರಾಜ್ ಟೆಕ್ಸ್‌ಟೈಲ್ಸ್ ಕಂಪನಿ ಈಗ ವಿಜಯಪುರದಲ್ಲಿ ಭವ್ಯ ಶೋ ರೂಂ ತೆರೆಯುವ ಮೂಲಕ ಆ ಕೊರತೆಯನ್ನು ನೀಗಿಸಿದೆ ಎಂದು ಅಲ್-ಅಮೀನ್ ಶಾಲೆ ಕಾರ್ಯದರ್ಶಿ ಕೆ.ಎಸ್. ಸಾಂಗ್ಲಿಕರ್ ಹೇಳಿದರು.

ನಗರದ ಎಸ್.ಎಸ್. ರಸ್ತೆಯ ಗುಡ್ಡೋಡಗಿ ಎಲೆಕ್ಟ್ರಾನಿಕ್ಸ್ ಪಕ್ಕದಲ್ಲಿರುವ ಸಾಂಗ್ಲಿಕರ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ರಾಮರಾಜ್ ಕಾಟನ್ ಟೆಕ್ಸ್‌ಟೈಲ್ಸ್ ಶೋ ರೂಂ ಉದ್ಘಾಟಿಸಿ ಅವರು ಮಾತನಾಡಿದರು.

ರಾಮರಾಜ್ ಟೆಕ್ಸ್‌ಟೈಲ್ಸ್ ಗುಣಮಟ್ಟದ ಉಡುಪುಗಳಿಗೆ ಹೆಸರುವಾಸಿಯಾಗಿದೆ. ದೇಶದೆಲ್ಲೆಡೆ ಅದರಲ್ಲೂ ದಕ್ಷಿಣ ಭಾರತದಲ್ಲಿ ಮನೆಮಾತಾಗಿರುವ ಈ ಕಂಪನಿ ಉಡುಪುಗಳು ಉತ್ತಮವಾಗಿರುತ್ತವೆ ಎಂಬ ಮಾತು ಜನಜನಿತವಾಗಿದೆ. ರಾಮರಾಜ್ ಕಂಪನಿ ಪಂಚೆ, ಶರ್ಟ್, ಶೂಟಿಂಗ್-ಶರ್ಟಿಂಗ್, ಸಾರಿ, ಮಕ್ಕಳ ಬಟ್ಟೆ ಹಾಗೂ ಪುರುಷ ಮತ್ತು ಸ್ತ್ರೀಯರ ಒಳ ಉಡುಪುಗಳ ಅಪಾರ ಭಂಡಾರ ಹೊಂದಿರುವ ಭವ್ಯ ಶೋ ರೂಂ ಆರಂಭಗೊಂಡು ಜಿಲ್ಲೆಯ ಜನತೆಗೆ ಹಾಗೂ ನಗರದ ಜನರಿಗೆ ಗುಣಮಟ್ಟದ ಬಟ್ಟೆಗಳನ್ನು ಕೊಳ್ಳಲು ಸುವರ್ಣಾವಕಾಶ ಕಲ್ಪಿಸಿದಂತಾಗಿದೆ ಎಂದು ಹೇಳಿದರು.

ರಾಮರಾಜ್ ಟೆಕ್ಸ್‌ಟೈಲ್ಸ್ ಕಂಪನಿ ಕರ್ನಾಟಕ ಉಸ್ತುವಾರಿ ರಾಜೇಶ ಜಿನ್ನನ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಮನೆ ಮಾತಾಗಿರುವ ರಾಮರಾಜ್ ಟೆಕ್ಸಟೈಲ್ಸ್‌ಗೆ ಒಳ್ಳೆಯ ಬೇಡಿಕೆ ಇದೆ. ಕರ್ನಾಟಕದ ಇತರ ಜಿಲ್ಲೆಗಳಲ್ಲಿರುವ ರಾಮರಾಜ್ ಟೆಕ್ಸ್‌ಟೈಲ್ಸ್‌ಗಳಿಗೆ ವಿಜಯಪುರ ಜಿಲ್ಲೆಯ ಜನತೆ ಭೇಟಿ ನೀಡಿ ಇಂಥದೊಂದು ಶೋ ರೂಂ ನಮ್ಮೂರಲ್ಲೂ ಬೇಕಿದೆ ಎಂಬ ಕೋರಿಕೆ ವ್ಯಕ್ತಪಡಿಸಿದ್ದರಿಂದ ವಿಜಯಪುರ ಜಿಲ್ಲೆಯಲ್ಲಿಂದು ರಾಮರಾಜ್ ಶೋ ರೂಂ ಆರಂಭಿಸಲಾಗಿದೆ. ಜಿಲ್ಲೆಯ ಜನತೆ ಸಹಕಾರ ನಮ್ಮೊಂದಿಗೆ ಸದಾ ಇರುತ್ತದೆಂದು ನಾವು ಆಶಿಸುತ್ತೇವೆ ಎಂದು ಹೇಳಿದರು.

ಶೋ ರೂಂ ಮಾಲೀಕ ಬಾಲಕೃಷ್ಣ ಸೊಂಡೂರ ಮಾತನಾಡಿ, ಜಿಲ್ಲೆಯ ಜನತೆಯ ಕೋರಿಕೆ ಮೇರೆಗೆ ರಾಮರಾಜ್ ಟೆಕ್ಸ್ ಟೈಲ್ಸ್ ಶೋ ರೂಂ ಉದ್ಘಾಟಿಸಲಾಗಿದೆ. ದಸರಾ, ದೀಪಾವಳಿ ಹಾಗೂ ಸಂಕ್ರಾಂತಿ ಹಬ್ಬದ ಬಟ್ಟೆ ಖರೀದಿಗೆ ಬೇರೆ ಊರುಗಳಿಗೆ ಹೋಗುವ ಅಗತ್ಯವಿಲ್ಲ. ನಿಮ್ಮೂರಲ್ಲೇ ಗುಣಮಟ್ಟದ ಹತ್ತಿ, ರೇಷ್ಮೆ ಬಟ್ಟೆಗಳನ್ನು ಕೊಂಡುಕೊಳ್ಳಲು ಸುವರ್ಣಾವಕಾಶ ನಿಮ್ಮದಾಗಿದೆ ಎಂದು ಹೇಳಿದರು. ಶ್ರೀಷಣ್ಮುಗಂ ಸುಂದರಂ, ಗಂಗಾವತಿಯ ರಾಮರಾಜ್ ಟೆಕ್ಸ್‌ಟೈಲ್ಸ್ ಶೋ ರೂಂ ಮಾಲೀಕ ಶರಣಬಸಪ್ಪ ಹಾಗೂ ಶೋ ರೂಂ ಸಿಬ್ಬಂದಿ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net