ರಂಭಾಪುರ ಗ್ರಾಮದ ಸುತ್ತ ಮುಳ್ಳು ಬೇಲಿ

VJP 31-2
Published on

ವಿಜಯಪುರ: ಕರೊನಾ ಭೀತಿ ದಿನೇ ದಿನೆ ಹೆಚ್ಚುತ್ತಿದ್ದು, ನಗರ ಹೊರವಲಯದ ರಂಭಾಪುರ ಗ್ರಾಮಸ್ಥರು ಪ್ರಮುಖ ರಸ್ತೆಗಳಿಗೆ ಮುಳ್ಳು ಬೇಲಿ ಹಾಕಿ ಗ್ರಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಆದಾಗ್ಯೂ ಗ್ರಾಮೀಣರಲ್ಲಿ ಕರೊನಾ ಭಯ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ಹೀಗಾಗಿ ರಂಭಾಪುರ ಗ್ರಾಮಸ್ಥರು ಗ್ರಾಮದೊಳಗೆ ಯಾರೂ ಬರದಂತೆ ಮುಳ್ಳು ಬೇಲಿ ಹಾಕಿದ್ದಾರೆ.
ಗ್ರಾಮದಿಂದ ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೆ ಹೋದವರು ಇದೀಗ ಕರೊನಾ ಭಯದಿಂದ ತವರಿಗೆ ಮರಳುತ್ತಿದ್ದಾರೆ. ಹಾಗೆ ಬರುವವರಲ್ಲಿ ಯಾರಿಗಾದರೂ ಕರೊನಾ ಇದ್ದರೆ ಹೇಗೆ? ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಗ್ರಾಮದೊಳಗೆ ಪ್ರವೇಶ ನಿಷೇಧಿಸಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net