ಡಿಎಚ್‌ಒ ಕಚೇರಿಗೆ ಸಿಇಒ ದಿಢೀರ್ ಭೇಟಿ

vjp-22-5-1
Published on

ವಿಜಯಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಜಿಪಂ ಸಿಇಒ ರಾಹುಲ್ ಸಿಂಧೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಿಬ್ಬಂದಿ ಹಾಜರಾತಿ ಪರಿಶೀಲಿಸಿ ಕಚೇರಿಗೆ ತಡವಾಗಿ ಹಾಜರಾದ 10 ಸಿಬ್ಬಂದಿಗೆ ನೋಟಿಸ್ ನೀಡಲು ಸೂಚಿಸಿದರು. ಸಮಯಕ್ಕೆ ಎಲ್ಲರೂ ಹಾಜರಾಗಲು, ಕಚೇರಿ ಬಿಡುವ ಸಂದರ್ಭದಲ್ಲಿ ಹಾಜರಿ ವಹಿಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಸಹಿ ಮಾಡಲು ಕಾರ್ಯಾಲಯದ ಅಧೀಕ್ಷಕರಿಗೆ ಸೂಚಿಸಿದರು.

ಇಲಾಖೆಗೆ ಸಂಬಂಧಿಸಿದ ನೇಮಕಾತಿ ಮಾಹಿತಿ ಪಡೆದರು. ಹೊಸದಾಗಿ ಬಂದ ಆ್ಯಂಬುಲೆನ್ಸ್‌ಗಳನ್ನು ಕೂಡಲೇ ಸಂಬಂಧಪಟ್ಟ ತಾಲೂಕುಗಳಿಗೆ ಹಸ್ತಾಂತರಿಸಲು ತಿಳಿಸಿದರು.
ಮಲೇರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ಸಾರ್ವಜನಿಕರಿಗೆ ತಿಳಿಯುವ ಹಾಗೆ ಸೂಚನಾ ಫಲಕಗಳನ್ನು ಅಳವಡಿಸಲು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ರಜೆಯಲ್ಲಿರುವುದು ಗಮನಿಸಿದರು.

ಡಾ.ಕೆ.ಎಂ.ಗುಂಡಬಾವಡಿ, ಡಾ.ಕವಿತಾ ದೊಡಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net