ಪೊಲೀಸ್ ಸಿಬ್ಬಂದಿಗೆ ಆಹಾರ ಪೂರೈಕೆ

VMS 31-3
Published on

ವಿಜಯಪುರ: ಲೌಕ್‌ಡೌನ್ ಕರ್ತವ್ಯದಲ್ಲಿ ನಿರತ ಪೊಲೀಸ್ ಸಿಬ್ಬಂದಿಗೆ ನಗರದ ಗಣ್ಯರು ಆಹಾರ ಪೂರೈಕೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.
ಏ.14 ರವರೆಗೆ ನಿತ್ಯ 400 ಸಿಬ್ಬಂದಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ನಗರದ ಗುತ್ತಿಗೆದಾರ ಬಿ.ಎಸ್. ಬಿರಾದಾರ ಅಡುಗೆ ದಿನಸಿ ಸಾಮಗ್ರಿಗಳನ್ನು ಪೂರೈಸುತ್ತಿದ್ದು, ಶುಭಶ್ರೀ ಹೋಟೆಲ್ ಮಾಲೀಕ ಶಾಂತೇಶ ಕಳಸಗೊಂಡ ಅಡುಗೆ ಮಾಡುವ ವಸ್ತುಗಳನ್ನು ಹಾಗೂ ಕುಡಿಯುವ ನೀರಿನ ಘಟಕದ ಮಾಲೀಕ ಆನಂದ ಬಾಗಾದಿ ಶುದ್ಧ ನೀರು ಪೂರೈಸುತ್ತಿದ್ದಾರೆ. ವಿವೇಕಾನಂದ ಸೇವಾ ಕೇಂದ್ರ ಸಹಕಾರದಿಂದ ಬಿ.ಎಸ್. ಬಿರಾದಾರ ಹಾಗೂ ಮಿತ್ರರು ಪೊಲೀಸ್ ಠಾಣೆಗಳಲ್ಲಿ ಆಹಾರ ಪೂರೈಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net