ಕೊಲೆ ಪ್ರಕರಣದ ಆರೋಪಿಗಳ ಬಂಧನ

VJP 28-3
Published on

ವಿಜಯಪುರ: ಕೊಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಅದೇ ಗ್ರಾಮದ ಸಿದ್ದಪ್ಪ ತಂದೆ ಶಂಕ್ರಪ್ಪ ಡಂಬಳ (42), ಪಡೆಪ್ಪ ಊರ್ಫ್ ಪಡಿಯಪ್ಪ ವಿಠ್ಠಲ ಡಂಬಳ (27), ದಯಾನಂದ ರಾಮಪ್ಪ ಹಡಪದ (32), ನಾಗಪ್ಪ ರಾಮಪ್ಪ ಹಡಪದ (35), ನಬಿಸಾಬ ಹಾಜಿಸಾಬ ಕಾಖಂಡಕಿ (55) ಬಂಧಿತ ಆರೋಪಿಗಳು.

ಘಟನೆ ವಿವರ

ಆ. 14 ರಂದು ಮಲಘಾಣ ಗ್ರಾಮದ ಮಹ್ಮದಸಾಬ ಹಾಜಿಸಾಬ ಕಾಖಂಡಕಿ ಅವರ ಜಮೀನಲ್ಲಿರುವ ಬಾವಿಯಲ್ಲಿ ಮಹಾದೇವ ಶಂಕ್ರಪ್ಪ ಡಂಬಳ ಅವರ ಮೃತ ದೇಹವು ಹಗ್ಗದಿಂದ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್‌ಪಿ ಅನುಪಮ್ ಅಗರಾವಲ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ರಾಮ ಅರಸಿದ್ದಿ ಅವರ ಮಾರ್ಗದರ್ಶನ ಹಾಗೂ ಉಪಾಧೀಕ್ಷಕ ಶಾಂತವೀರ ಈ, ಸಿಪಿಐ ಸೋಮಶೇಖರ ಜಿ.ಜುಟ್ಟಲ್, ಪಿಎಸ್‌ಐ ವಿನೋದ ದೊಡಮನಿ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದೆ. ಆರೋಪಿಗಳ ವಿಚಾರಣೆ ನಡೆಸಲಾಗಿ ಆಸ್ತಿ ವಿವಾದದ ವೈಮನಸ್ಸಿನಿಂದಾಗಿ ಕೊಲೆ ಮಾಡಿರುವ ವಿಷಯ ಬಯಲಾಗಿದೆ. ಆರೋಪಿಗಳನ್ನು ಪತ್ತೆ ಹೆಚ್ಚಿದ ತಂಡಕ್ಕೆ ವಿಶೇಷ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಅನುಪಮ್ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net