

ವಿಜಯಪುರ: ನಗರದ ಪ್ರತಿಷ್ಠಿತ ಪಿಡಿಜೆ ‘ಬ’ ಶಾಲೆಯ 1978ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳು ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ಗುರುವಂದನೆ ಹಾಗೂ ಸ್ನೇಹಕೂಟ ನಡೆಸಿದರು.
ನಿವೃತ್ತ ಮುಖ್ಯ ಗುರು ಎಂ.ಆರ್. ಕುಲಕರ್ಣಿ ಸಾನ್ನಿಧ್ಯದಲ್ಲಿ ಒಟ್ಟು 8 ಹಿರಿಯ ಗುರುಗಳಿಗೆ ವಿಶೇಷವಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಕಚೇರಿ ಸಹಾಯಕರಾಗಿದ್ದ ಬಸಪ್ಪ ಹಾಗೂ ಮುರುಗೆಪ್ಪ ಕೂಡ ಸನ್ಮಾನ ಸ್ವೀಕರಿಸಿದರು.
ಗುರುಗಳಾದ ವಿ.ಎಲ್. ಮೋಕಾಶಿ, ಕೆ.ವಿ. ಪಾಟೀಲ, ಬಿ.ಬಿ. ಕುಲಕರ್ಣಿ, ಸಿದ್ದಾಂತಿ ಮತ್ತು ಪಿ.ಕೆ. ಕುಲಕರ್ಣಿ ಇವರಿಗೆ ಬೆಳ್ಳಿಯ ಕಂಕಣ ತೊಡಿಸಿ ಗೌರವ ಸಮರ್ಪಿಸಲಾಯಿತು.
ಗುರುವಂದನೆ ಸ್ವೀಕರಿಸಿದ ಕೆ.ವಿ. ಪಾಟೀಲ ಮಾತನಾಡಿ, ಗುರುಗಳನ್ನು ಒಳ್ಳೆಯವರೆಂದು ನಿರ್ಧರಿಸುವುದು ಶಿಷ್ಯರು ಮಾತ್ರ. ಪಿಡಿಜೆ ಎಂಬುದು ಸರಸ್ವತಿ ಮಂದಿರ. ಅಲ್ಲಿ ಕೇವಲ ಜ್ಞಾನ ತುಂಬುವುದಷ್ಟೇ ಅಲ್ಲದೇ ಸಂಸ್ಕಾರ ನೀಡಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿಸುವ ಕಾರ್ಯ ನಡೆಯುತ್ತಿದೆ ಎಂದರು.
ವಿ.ಎಲ್. ಮೊಕಾಶಿ ಮಾತನಾಡಿ, ಮನುಷ್ಯನ ಕರ್ಮಗಳ ಕುರಿತು ವಿವರಿಸಿದರು. ಸೂರ್ಯಪ್ರಭ ಪ್ರಾರ್ಥಿಸಿದರು. ಮಧುಕರ ಹೇರಕಲ್ ಸ್ವಾಗತಿಸಿದರು. ಪ್ರಸಾದ್ ಕರ್ಜೊಳ ವಂದಿಸಿದರು. ವಿನೋದ ಜಹಾಗಿರದಾರ ನಿರೂಪಿಸಿದರು.
ಚಿದಂಬರ ಅವರಾಸಂಗ ಮನರಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಪರಿಮಳ ಆವರಸಂಗ, ಸೀಮಾ ಪದಕಿ, ಆರ್.ಬಿ. ಕುಲಕರ್ಣಿ, ಗುರು ಕುಲಕರ್ಣಿ, ಚಾಂದಸಾಬ ಕಲಬುರ್ಗಿ, ಗುರು ಪವಾರ, ಮಧು ಹೇರಕಲ್ ಅವರ ಗೀತ ಗಾಯನ ಮನಸೂರೆಗೊಂಡಿತು.