ವರ್ಧಮಾನ ಜೈನ ಸಂಘಟನೆಯಿಂದ ಮಾಸ್ಕ್ ವಿತರಣೆ

VMS 15-5
Published on

ವಿಜಯಪುರ: ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕರೊನಾ ವೈರಸ್‌ದಿಂದ ಜನರು ಭಯಭೀತರಾಗಿದ್ದು, ನಗರದ ವರ್ಧಮಾನ ಜೈನ ಸಂಘಟನೆ ಭಾನುವಾರ ಬೀದಿಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ.
ನಗರದ ವಿವಿಧೆಡೆ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಮಾಸ್ಕ್ ವಿತರಿಸಿ ಕರೊನಾ ವೈರಸ್‌ದಿಂದ ಭಯಭೀತರಾಗದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆರೋಗ್ಯವಂತರಾಗಿ ಎಂದು ಜಾಗೃತಿ ಮೂಡಿಸಲಾಯಿತು.
ವರ್ಧಮಾನ ಜೈನ ಸಂಘಟನೆ ಅಧ್ಯಕ್ಷ ರಿಕಬ್ ರುಣವಾಲ, ಕಾರ್ಯದರ್ಶಿ ಗಿರೀಶ ರುಣವಾಲ, ಮಾರ್ಗದರ್ಶಕ ಅಶೋಕ ರುಣವಾಲ, ವಿಜಯ ರುಣವಾಲ, ಅಮಿತ ಕಠಾರಿಯಾ, ರವೀಂದ್ರ ರುಣವಾಲ, ದೀಪಕ ರುಣವಾಲ, ನೀರಜ ಬುತಡಾ, ವಿಕ್ಕಿ ಬುತಡಾ, ಅಮಿತ ರುಣವಾಲ, ಮಿತಲ್ ರುಣವಾಲ, ಮಯೂರ ಕಠಾರಿಯಾ ಸೇರಿದಂತೆ ವಿವಿಧ ಸದಸ್ಯರು ನಗರದ ವಿವಿಧೆಡೆ ಜನರೆಡೆ ಹೋಗಿ ಉಚಿತ ಮಾಸ್ಕ್‌ಗಳನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net