ಭಾರತೀಯರಲ್ಲಿ ಅಡಕವಾಗಿದೆ ಪ್ರತಿಭೆ; ನಿರ್ಭಯಾನಂದ ಸ್ವಾಮೀಜಿ ಹೇಳಿಕೆ

SHIBIRA
ಗಂಗಾವತಿ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜಿಎಚ್‌ಎನ್ ವಾಣಿಜ್ಯ ಪದವಿ ಕಾಲೇಜು ಮತ್ತು ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರವನ್ನು ವಿಜಯಪುರ ರಾಮಕೃಷ್ಣಾಶ್ರಮದ ಅಧ್ಯಕ್ಷ ನಿರ್ಭಯಾನಂದ ಸ್ವಾಮೀಜಿ ಶನಿವಾರ ಉದ್ಘಾಟಿಸಿದರು. ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ, ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ ಇತರರಿದ್ದರು.
Published on

ಗಂಗಾವತಿ: ಜಾಗತಿಕ ಮಟ್ಟದಲ್ಲಿ ಭಾರತೀಯರು ಉತ್ತಮ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಭಾರತೀಯರಲ್ಲಿ ಪ್ರತಿಭೆ ಅಡಕವಾಗಿದೆ ಎಂದು ವಿಜಯಪುರ ರಾಮಕೃಷ್ಣಾಶ್ರಮದ ಅಧ್ಯಕ್ಷ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜಿಎಚ್‌ಎನ್ ವಾಣಿಜ್ಯ ಪದವಿ ಕಾಲೇಜು ಮತ್ತು ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಉಪನ್ಯಾಸ ನೀಡಿದರು.


ಯುವ ಸಮುದಾಯದ ಸ್ವಸಾಮರ್ಥ್ಯದ ಅರಿವಿಲ್ಲದೇ ಕೀಳಿರಮೆಯಿಂದ ಬಳಲುತ್ತಿದ್ದು, ಪರಿಶ್ರಮದ ಮೂಲಕ ಯಶಸ್ಸು ಗಳಿಸಲು ಸಾಧ್ಯ. ಬಡತನದಲ್ಲಿ ಓದಿ ಉನ್ನತ ಮಟ್ಟದ ಸಾಧನೆ ಮಾಡಿದ ಹಲವು ನಿದರ್ಶನಗಳಿವೆ. ಉನ್ನತ ಗುರಿಯೊಂದಿಗೆ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಸಾಧನೆ ಮಾಡಲು ಸಾಧ್ಯ. ನಿರಾಶವಾದಿ, ಉದಾಸೀನ, ನಿಷ್ಕ್ರಿಯ ಯುವಜನತೆಗೆ ವಿವೇಕಾನಂದರ ವಾಣಿ ಬಹುಮುಖ್ಯ ಎಂದರು.

ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಆಲಸಿಗಳಾಗದೇ ನಿರಂತರ ಪರಿಶ್ರಮದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ರಾಷ್ಟ್ರೀಯ ನಾಯಕರ ಬದುಕಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಮಾಲಿ ಪಾಟೀಲ್, ನಿರ್ದೇಶಕ ಗುಂಜಳ್ಳಿ ರಾಜಶೇಖರಪ್ಪ, ಉದ್ಯಮಿ ಸಂತೋಷ ಕೆಲೋಜಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕ ಶಿವಪ್ರಸಾದ ಹಿರೇಮಠ, ಪ್ರಾಚಾರ್ಯರಾದ ಡಾ.ಶರಣಬಸಪ್ಪ ಕೋಲ್ಕಾರ್, ಪ್ರೊ.ಜಿ.ಬಸವರಾಜ ಅಯೋಧ್ಯಾ, ಉಪನ್ಯಾಸಕರಾದ ಡಾ. ಪವಿತ್ರಾ, ಗುಂಜಳ್ಳಿ ತಿಪ್ಪೇರುದ್ರೇಶ, ಪ್ರೊ.ಶ್ವೇತಾ, ಪ್ರೊ.ಜಯಲಕ್ಷ್ಮೀ, ಪ್ರೊ.ನಂದಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net