ಸೇವಾಲಾಲ ಜಯಂತ್ಯುತ್ಸವ ಆಚರಣೆ

VMS-22-13
Published on

ವಿಜಯಪುರ: ನಗರದ ರಾಜರಾಜೇಶ್ವರ ಕಲ್ಯಾಣ ಮಂಟಪದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಂಜಾರಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು.

ಕೆಸರಟ್ಟಿಯ ಸೋಮಲಿಂಗ ಮಹಾರಾಜರು, ಕೆಸರಾಳದ ಧನಸಿಂಗ್ ಮಹಾರಾಜರು, ಸೋಮದೇವರಹಟ್ಟಿಯ ಜಗನು ಮಹಾರಾಜರು ಹಾಗೂ ಅಲಿಯಾಬಾದ್‌ದ ನೀಲಕಂಠೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಲೋಕಸಭೆ ಸದಸ್ಯ ಡಾ.ಉಮೇಶ ಜಾಧವ ಆಗಮಿಸಿದದರು. ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್, ಅರ್ಜುನ ರಾಠೊಡ ಆಗಮಿಸಿದ್ದರು.

ವಿಜಯಕುಮಾರ ಕುಡಿಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಸಿಂಗ್ ಚವಾನ್, ಶ್ರೀಮಂತ ಚವಾಣ್, ಶಿವಾಜಿ ರಜಪೂತ, ಎಸ್‌ಟಿ ಯುನಿಯನ್ ಅಧ್ಯಕ್ಷ, ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮಂತ ಚವಾಣ್ ಅವರಿಂದ ಸಂಗೀತ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net