ದಾರ್ಶನಿಕರ ಆದರ್ಶಗಳನ್ನು ಪಾಲಿಸಿ

hn-4-2
Published on

ವಿಜಯಪುರ: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಸೇರಿ ಅನೇಕ ದಾರ್ಶನಿಕರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ಭಾರತದ ಅಭಿವೃದ್ಧಿ ಸಾಧ್ಯ ಎಂದು ಪತ್ರಕರ್ತ ಕಲ್ಲಪ್ಪ ಶಿವಶರಣ ಹೇಳಿದರು.

ನಗರದ ಶಿಖಾರಖಾನೆ ಹಿರೋಡೇಶ್ವರ ದೇವಸ್ಥಾನ ಹತ್ತಿರ ಯುವತಿಯರ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ಕಂಡ ಕನಸು ಬರೀ ಕನಸಾಗಿಯೇ ಉಳಿದಿದೆ. ರಾತ್ರಿ ಬಿಡಿ ಬರೀ ಹಗಲಲ್ಲಿ ಮಹಿಳೆ ತಿರುಗಾಡಬೇಕಾದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೂ ಇಂದು ಮಹಿಳೆಯರು ಆತ್ಮರಕ್ಷಣೆಯ ಕೌಶಲಗಳನ್ನು ಕಲಿಯಬೇಕಾದ್ದದ್ದು ಅತೀ ಅವಶ್ಯವಾಗಿದೆ ಎಂದು ತಿಳಿಸಿದರು.

ಯುವತಿಯರ ಸಂಘಟನೆ ಅಧ್ಯಕ್ಷೆ ಲಕ್ಷ್ಮೀ ಶಿರಶ್ಯಾಡ, ಸದಸ್ಯೆಯರಾದ ಆಲಿಯಾ ಕೂಚಬಾಳ, ಪಲ್ಲವಿ ಜಾಗೀರದಾರ, ಪದ್ಮಾ ಭಂಟನೂರ, ಅಪೂರ್ವ, ಶಿವಲೀಲಾ ಅರಳಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net