ಕಂಟೇನ್ಮೆಂಟ್ ಪ್ರದೇಶ ತೆರವುಗೊಳಿಸಿ

VMS-15-4
Published on

ವಿಜಯಪುರ: ಕರೊನಾದಿಂದ ನಾಲ್ಕು ತಿಂಗಳಿಂದ ಸೀಲ್‌ಡೌನ್ ಮಾಡಿಲಾಗಿದ್ದ ಚಪ್ಪರಬಂದ್ ಕಾಲನಿ ಹಾಗೂ ಅಲ್ಲಾಪುರ ಬೇಸ್ ಪ್ರದೇಶಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ.ರಾಜು ಆಲಗೂರ ಅವರು ಸೋಮವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.

ಈ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚಾಗಿ ಕೂಲಿ ಕಾರ್ಮಿಕರಿದ್ದು, ನಿತ್ಯ ಕೂಲಿಯಿಂದ ಜೀವನೋಪಾಯ ನಡೆಸುತ್ತಾರೆ. ಸೀಲ್‌ಡೌನ್‌ದಿಂದ ಅವರ ಜೀವನ ಅಸ್ತವ್ಯಸ್ತಗೊಂಡಿದ್ದು, ಅವರು ವೈದ್ಯಕೀಯ ಸೇವೆ, ಹಾಲು-ತರಕಾರಿಗೂ ಪರದಾಡುವಂತಾಗಿದೆ. ಸದ್ಯ ಈ ಪ್ರದೇಶಗಳಲ್ಲಿ ಕರೊನಾ ಪೀಡಿತರ ಸಂಖ್ಯೆ ಕಡಿಮೆಯಾಗಿದ್ದು, ಅವಶ್ಯಕ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಸೀಲ್‌ಡೌನ್ ಕಡಿತಗೊಳಿಸಿ ಜನಸಾಮಾನ್ಯರು ತಮ್ಮ ಜೀವನ ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ವಿಠಲ ಕಟಕಧೋಂಡ, ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಮಹ್ಮದ್‌ರಫೀಕ್ ಟಪಾಲ್, ಐ.ಎಂ. ಇಂಡೀಕರ್, ಸಾಹೇಬಗೌಡ ಬಿರಾದಾರ, ಸಂತೋಷ ಪಾಟೀಲ, ವಸಂತ ಹೊನಮೊಡೆ, ಅಡಿವೆಪ್ಪ ಸಾಲಗಲ, ತಮ್ಮಣ್ಣ ಮೇಲಿನಕೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net