ಶತಕ ದಾಟಿದ ಮೃತರ ಸಂಖ್ಯೆ

Corana
Published on

ವಿಜಯಪುರ : ಜಿಲ್ಲೆಯಲ್ಲಿ ಭಾನುವಾರ ಮತ್ತೆ ನಾಲ್ವರು ಮೃತಪಟ್ಟಿದ್ದು, 127 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ಮೃತರ ಸಂಖ್ಯೆ ಒಟ್ಟು 103ಕ್ಕೆ ಏರಿದೆ. ಮೃತರ ಅಂತ್ಯ ಸಂಸ್ಕಾರ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

ಗುಣಮುಖರ ಸಂಖ್ಯೆ ಹೆಚ್ಚಳ
ಜಿಲ್ಲೆಯಲ್ಲಿ ಇಲ್ಲಿವರೆಗೆ 6,589 ಜನರಿಗೆ ಸೋಂಕು ದೃಢವಾಗಿದೆ. ಭಾನುವಾರ 196 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇಲ್ಲಿವರೆಗೆ ಒಟ್ಟು 5,713 ಜನರು ಬಿಡುಗಡೆಗೊಂಡಿದ್ದಾರೆ.

73,589 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 66,014 ಜನರ ವರದಿ ನೆಗೆಟಿವ್ ಬಂದಿದೆ. 966 ಜನರ ವರದಿ ಬರಬೇಕಿದೆ. 773 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 54,986 ಜನರ ಮೇಲೆ ನಿಗಾವಹಿಸಲಾಗಿದೆ. 41,851 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 7,319 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ.

ತಾಲೂಕುವಾರು ಮಾಹಿತಿ
ವಿಜಯಪುರ ತಾಲೂಕು ವ್ಯಾಪ್ತಿ 3470, ಬಸವನಬಾಗೇವಾಡಿ 658, ಬಬಲೇಶ್ವರ 65, ಚಡಚಣ 35, ದೇವರಹಿಪ್ಪರಗಿ 59, ಇಂಡಿ 592, ಕೊಲ್ಹಾರ 57, ಮುದ್ದೇಬಿಹಾಳ 638, ನಿಡಗುಂದಿ 36, ಸಿಂದಗಿ 546, ತಾಳಿಕೋಟೆ 209, ತಿಕೋಟಾ 76 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 148 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net