ಅನೈತಿಕ ಸಂಬಂಧ, ಜೋಡಿ ಕೊಲೆ

Murder
Published on

ವಿಜಯಪುರ: ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆ ಸೇರಿ ಜೋಡಿ ಕೊಲೆಯಾದ ಘಟನೆ ವಿಜಯಪುರದ ಹೊರವಲಯ ಅಲಿಯಾಬಾದ ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಅಮರನಾಥ ಸೊಲ್ಲಾಪುರ (25) ಮತ್ತು ಸುನಿತಾ ತಳವಾರ (35) ಕೊಲೆಯಾದವರು. ತೋಟದ ಮನೆಯಲ್ಲಿ ಮಂಗಳವಾರ ರಾತ್ರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ವಿವಾಹಿತ ಮಹಿಳೆ ಮತ್ತು ಯುವಕನನ್ನು ಮಹಿಳೆಯ ಅಪ್ರಾಪ್ತ ಮಗ ಮತ್ತು ಆಕೆಯ ತಂದೆಯೇ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾರೆ. ಸುನಿತಾಳ ಪತಿ ವರ್ಷದ ಹಿಂದೆ ಮೃತಪಟ್ಟಿದ್ದರು. ಆಕೆಯ ಜತೆ ಅಮರನಾಥ ಅನೇಕ ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಮಂಗಳವಾರ ರಾತ್ರಿ ಸುನಿತಾಳ ತಂದೆ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಮಗ ಮನೆಗೆ ಬಂದಾಗ ಯುವಕನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ಕಂಡ ಆಕೆಯ ತಂದೆ ಹಾಗೂ ಮಗ ಇಬ್ಬರನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಬುಧವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ರಾಮಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net