ಪಾಲಿಕೆ ಚುನಾವಣೆಗೆ ಸಿದ್ಧರಾಗಿ

hn-3-2
Published on

ವಿಜಯಪುರ: ಮಹಾನಗರಪಾಲಿಕೆ ಚುನಾವಣೆಗೆ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಜೆಡಿಎಸ್ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜನ ಸಾಮಾನ್ಯರ ನೋವು ನಲಿವು ಆಲಿಸಿ ಕೆಲಸ ಮಾಡಬೇಕು. ಪಕ್ಷಕ್ಕೆ ತಮ್ಮ ಸಲಹೆ ಸೂಚನೆ ಕೊಡಬೇಕು. ಮುಂಬರುವ ಮಹಾನಗರಪಾಲಿಕೆ ಚುನಾವಣೆಗೆ ಎಲ್ಲ ರೀತಿಯ ಸಹಾಯ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ತಮ್ಮ ತಮ್ಮ ವಾರ್ಡ್‌ನಲ್ಲಿ ಕೆಲಸ ಮಾಡಿ ಮುಂಬರುವ ಚುನಾವಣೆಗೆ ತಯಾರಿ ಮಾಡಿಕೊಂಡು ಪಕ್ಷದ ಬೆಳವಣಿಗೆ ಮಾಡಬೇಕು. ಶಾಸಕರ ನೇತೃತ್ವದಲ್ಲಿ ಚುನಾವಣೆ ಎದುರಿಸೋಣ ಎಂದು ಹೇಳಿದರು.

ಮಹಿಳಾ ಅಧ್ಯಕ್ಷೆ ಸ್ನೇಹಾ ಶೆಟ್ಟಿ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಯುವ ಘಟಕದ ಅಧ್ಯಕ್ಷ ಸುನೀಲ ರಾಠೋಡ, ಎಸ್.ಸಿ., ಎಸ್.ಟಿ. ಘಟಕದ ಅಧ್ಯಕ್ಷ ಸಿದ್ದು ಕಾಮತ, ನಗರ ಘಟಕದ ಅಧ್ಯಕ್ಷ ರಾಜು ಹಿಪ್ಪರಗಿ, ಎಸ್.ಎಸ್. ಖಾದ್ರಿ ಇನಾಮದಾರ, ಮಹಿಬೂಬ ಬಕ್ಷಿ, ಹುಸೇನ ಬಾಗಾಯತ, ಸಂಜು ಹಿರೇಮಠ, ಸೋಮು ಉಪ್ಪಾರ, ಶಾಮನ ಇನಾಮದಾರ, ಮನೋಜ ಬಿರಾದಾರ, ಮುಕಬಿಲ್ ಇಜಾಜ, ಅಮಜು ಹೊನ್ನುಟಗಿ, ಅರವಿಂದ ಹಂಗರಗಿ, ಬಸನಗೌಡ ಮಾಡಗಿ, ವಾಜೀದ ಖಾಜಿ, ಜಾರ ಕಲಾದಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net