

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಬಾರಿಗೆ ಆಡಳಿತಕ್ಕೆ ಬಂದ ವರ್ಷದೊಳಗೆ ಮಾಡಿದ ಸಾಧನೆಗಳ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಸದ ರಮೇಶ ಜಿಗಜಿಣಗಿ ನೇತೃತ್ವ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಮನೆ ಮನೆಗೆ ತೆರಳಿ ಕರಪತ್ರ ಹಂಚಿದರು. ಸರ್ಕಾರ ಈವರೆಗೆ ಜಾರಿಗೆ ತಂದ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಜಗತ್ತೇ ಕೊಂಡಾಡುವಂಥ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಕರೊನಾ ನಿಯಂತ್ರಿಸಲು ಇಡೀ ಜಗತ್ತೇ ನಲಗುತ್ತಿರುವಾಗ ಅದನ್ನು ಸಮರ್ಥವಾಗಿ ನಿಭಾಯಿಸಿ ಮೋದಿ ಜನಮೆಚ್ಚುಗೆ ಗಳಿಸಿದ್ದಾರೆ. ಲಾಕ್‌ಡೌನ್‌ನಂಥ ದಿಟ್ಟ ನಿರ್ಧಾರ ತೆಗೆದುಕೊಂಡು ಅದನ್ನು ಅಚ್ಚುಕಟ್ಟಾಗಿ ಅನುಷ್ಟಾನಗೊಳಿಸಿದ್ದಾರೆ. ಆ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
60 ದಿನಗಳ ಲಾಕ್‌ಡೌನ್‌ನಿಂದ ದೇಶಕ್ಕೆ ಅನೇಕ ಸವಾಲುಗಳು ಎದುರಾಗಿದ್ದರೂ ಎದೆಗುಂದದ ಪ್ರಧಾನಿ ಮೋದಿ ಬಡವರ, ಶ್ರಮಿಕರ, ದೀನ ದಲಿತರ, ರೈತರ, ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿರುವವರ ನೆರವಿಗಾಗಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದಾರೆ. ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್‌ನವರು ಪ್ರಧಾನಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅದಕ್ಕೆ ಮೋದಿ ಅವರ 1 ವರ್ಷದ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿರುವುದಾಗಿ ತಿಳಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಬಸವರಾಜ ಬಿರಾದಾರ, ವಿವೇಕಾನಂದ ಡಬ್ಬಿ, ರವಿಕಾಂತ ಬಗಲಿ, ಗೂಳಪ್ಪ ಶಟಗಾರ, ಗೋಪಾಲ ಘಟಕಾಂಬಳೆ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಎಚ್.ಆರ್. ಮಾಚಪ್ಪನವರ, ಕಾಂತು ಸಿಂಧೆ, ವಿಠ್ಠಲ ನಡುವಿನಕೇರಿ, ರಾಜೇಂದ್ರ ವಾಲಿ, ವಿಜಯ ಜೋಶಿ, ಸಂಗಮೇಶ ಉಕ್ಕಲಿ, ಸಿದ್ದು ಮಲ್ಲಿಕಾರ್ಜುನಮಠ, ಪಾಪುಸಿಂಗ, ಸಚೀನ ಅಡಕಿ, ವಿಜಯ ಪಾಟೀಲ, ಭರತ ಕೋಳಿ, ರಾಕೇಶ ಕುಲಕರ್ಣಿ, ಪ್ರಶಾಂತ ಅಗಸರ, ಸಂದೀಪ ಪಾಟೀಲ, ಉಮೇಶ ಅಡಕಿ, ಸಂಪತ ಕೋವಳ್ಳಿ, ವಿನಾಯಕ ದಹಿಂಡೆ, ವಿಜಯ ಅಂಗಡಗೇರಿ ಮತ್ತಿತರರಿದ್ದರು.