ಪಾಲಿಕೆ ಚುನಾವಣೆಗೆ ಸಂಘಟಿತರಾಗಿ

hn-15-3
Published on

ವಿಜಯಪುರ: ಜಾತ್ಯತೀತ ಜನತಾದಳ ಪಕ್ಷ (ಜೆಡಿಎಸ್) ಸಂಘಟನೆಯನ್ನು ಕೆಳಹಂತದಿಂದ ಸಂಘಟಿಸಿ ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ವಾರ್ಡ್‌ಗಳಿಗೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹೋರಾಟ ಮಾಡಬೇಕೆಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿರುವ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷದ ಕಾರ್ಯಕರ್ತರು ಹೋಂದಾಣಿಕೆಯಿಂದ ಸದಸ್ಯತ್ವ ಅಭಿಯಾನ ಕೈಗೊಂಡರೆ ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕ ಸ್ಥಾನಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷರಾದ ದಿಲಾವರ ಖಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಶ್ರಮಿಸುವೆ ಎಂದರು.
ಮುಖಂಡರಾದ ಹುಸೇನ ಬಾಗಾಯತ, ದಸ್ತಗೀರ ಸಾಲೋಟಗಿ, ಇಜಾಜ ಮುಕ್ಬಿಲ್, ರಾಜು ಹಿಪ್ಪರಗಿ, ಸ್ನೇಹಾ ಶೆಟ್ಟಿ, ಅನ್ವರ ಮಕಾಂದಾರ, ಕೌಸರ ಶೇಖ, ಸುಭಾಸ ನಾಯಕ, ಚಂದ್ರಕಾಂತ ತಾರನಾಳ, ಮನೋಜ ಬಿರಾದಾರ, ನಿಂಗನಗೌಡ ಸೋಲಾಪುರ, ರೂಪಾ ಕುಂಬಾರ, ಮಹಾದೇವಿ ತಳಕೇರಿ, ರಾಜು ಹಿರೇಮಠ, ಜಾರ ರೂಡಗಿ, ಶಿವಾನಂದ ಹಿರೇಕುರುಬರ, ಅರುಣ ತಳಕೇರಿ, ಗೋವಿಂದ ಜೋಶಿ, ಶಕೀಲ ನದ್ಾ, ಸದ್ದಾಂ ಪಾಂಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net