ಮೂರು ಘಟಕಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

VJP 10-2
Published on

ವಿಜಯಪುರ: ಇಂಧನ ಉಳಿತಾಯ, ಉತ್ತಮ ಸಾಧನೆ ಹಾಗೂ ಶ್ಲಾಘನೀಯ ಸೇವೆಗಾಗಿ ಈಕರಸಾ ಸಂಸ್ಥೆಗೆ ಇಂಧನ ಉಳಿತಾಯ ಮತ್ತು ಸಂಶೋಧನಾ ಸಂಸ್ಥೆ (ಪಿಸಿಆರ್‌ಎ) ಯಿಂದ 2018-19 ನೇ ಸಾಲಿನ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ.
ವಿಜಯಪುರ ಘಟಕ-2, ಬಸವನಬಾಗೇವಾಡಿ ಹಾಗೂ ಸಿಂದಗಿ ವಿಭಾಗಗಳಿಗೆ ಈ ಪ್ರಶಸ್ತಿ ಲಭಿಸಿದ್ದು ಈಚೆಗೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರಶಸ್ತಿ ಪ್ರದಾನ ಮಾಡಿದರು. ವಿಭಾಗದ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ, ತಾಂತ್ರಿಕ ಶಿಲ್ಪಿ ಎ.ಎಚ್. ಮಧಬಾವಿ ಹಾಗೂ ವಿಭಾಗಿಯ ಸಾರಿಗೆ ಅಧಿಕಾರಿ ಡಿ.ಎ. ಬಿರಾದಾರ ಪ್ರಶಸ್ತಿ ಹಾಗೂ ಸ್ಮರಣಿಕೆ ಸ್ವೀಕರಿಸಿದರು.
ಘಟಕಗಳ ವತಿಯಿಂದ ವಿಜಯಪುರ ಘಟಕ-2ರ ಘಟಕ ವ್ಯವಸ್ಥಾಪಕ ಬಿ.ಎ. ಹೂಗಾರ, ಬ.ಬಾಗೇವಾಡಿಯ ಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ ಹಾಗೂ ಸಿಂದಗಿ ಘಟಕದ ವ್ಯವಸ್ಥಾಪಕ ಎಸ್.ಎಂ. ವಾಲಿಕಾರ ಸ್ಮರಣಿಕೆ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net