

ವಿಜಯಪುರ: ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿದ್ದು, ಅದರ ಶುಲ್ಕವನ್ನು ಇಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವನಿರ್ಮಾಣ ವೇದಿಕೆ ಹಾಗೂ ಹಿಂದು ಟೈಗರ್ ಸಂಘಟನೆ ವತಿಯಿಂದ ಸೋಮವಾರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಕರೊನಾ ಹಾವಳಿಯಿಂದ ತತ್ತರಿಸಿದ ಜನ ಸಾಮಾನ್ಯರು ಕೃಷಿಕೂಲಿ ಕಾರ್ಮಿಕರು, ಬಡ ರೈತರು ಹಾಗೂ ದಿನಗೂಲಿ ನೌಕರರು ಮಾಸ್ಕ್ ಧರಿಸದಿದ್ದಲ್ಲಿ ಒಂದು ಸಾವಿರ ರೂ. ದಂಡ ವಿಧಿಸುವುದರಿಂದ ತುಂಬಾ ಹೊರೆಯಾಗುತ್ತಿದೆ. ಮಾಸ್ಕ್ ನೆಪದಲ್ಲಿ ದಂಡ ವಸೂಲಿ ಮಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯ.ದಿನಕ್ಕೆ 300 ರೂ. ಸಂಪಾದಿಸುವ ಕಾರ್ಮಿಕರು ಸಾವಿರ ರೂ. ದಂಡ ಕಟ್ಟುವುದು ಯಾವ ನ್ಯಾಯ? ಮಾಸ್ಕ್ ಹಾಕಿಕೊಳ್ಳುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಆದರೆ, ಅದಕ್ಕೆ ಈ ಹಿಂದೆ ಜಾರಿಗೊಳಿಸಿದಂತೆ 100 ರೂ. ದಂಡ ವಿಧಿಸಿದರೆ ಸೂಕ್ತ ಎಂದರು.
ಹಿಂದು ಟೈಗರ್ ಸಂಘಟನೆ ರಾಜ್ಯಾಧ್ಯಕ್ಷೆ ಲಕ್ಷ್ಮ್ಮೀ ಹೊಸಮನಿ, ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಉಪಾಧ್ಯಕ್ಷ ಕೃಷ್ಣಾಜಿ ಕುಲಕರ್ಣಿ, ಸಂಘಟಕರಾದ ಪವಿತ್ರಾ ಕೆರೆಕರ, ಮಾಧುರಿ ರಾಠೋಡ, ಕೆ.ಕೆ.ಬನಟ್ಟಿ, ಮಹಾದೇವಿ ತಾಂಬಾ, ಲಕ್ಷ್ಮ್ಮೀ ಮಸಳಿ, ಯಮನಾಬಾಯಿ ಕಳಸದವರ, ಭೀಮಾಶಂಕರ ವಿರಕ್ತಮಠ, ಯಲ್ಲಪ್ಪ ಮಾದರ, ಸದಾಬಾಯಿ ಮಾನೆ, ಅಮೋ ಮಾನೆ, ಸಂತೋಷ ಬಳ್ಳೊಳ್ಳಿ, ರಾಜು ಗೋಳಿ, ಸಚಿನ ಪಾಟೀಲ, ನವೀನ ಕೆರೆಕರ, ಜಗದೀಶ ಹಿಪ್ಪರಗಿ, ಪ್ರಶಾಂತ ಹಿಪ್ಪರಗಿ, ವಸಂತರಾವ ಕುಲಕರ್ಣಿ ಇತರರಿದ್ದರು.