

ಸವಣೂರ: ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು ತಾಲೂಕಿನ ಯಲವಿಗಿ ಗ್ರಾಮದ ನಿಲ್ದಾಣದಲ್ಲಿ ಜ. 1ರಂದು ರಾತ್ರಿ 9.50ಕ್ಕೆ ನಿಲುಗಡೆಯಾಯಿತು.
ಯಲವಿಗಿ ನಿಲ್ದಾಣದಲ್ಲಿ ಮಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗುತ್ತಿದ್ದಂತೆ ಗ್ರಾಮದ ಪ್ರಯಾಣಿಕರ ಸಂಘದ ಕಾರ್ಯಕರ್ತರು, ಯಲವಿಗಿ ಗ್ರಾಮದ ಪ್ರಮುಖರು ಎಕ್ಸ್‌ಪ್ರೆಸ್ ರೈಲಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ರೈಲು ಲೋಕೋ ಪೈಲಟ್ ಮತ್ತು ಸ್ಟೇಷನ್ ಮಾಸ್ತರ ಅವರನ್ನು ಸನ್ಮಾನಿಸಲಾಯಿತು.
ಪ್ರಯಾಣಿಕ ಸಂಘದ ಅಧ್ಯಕ್ಷ ಡಾ. ಪ್ರಸನ್ನ ರಾಯಚೂರ ಮಾತನಾಡಿ, ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆಯಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿಗೆ ನೇರವಾಗಿ ತೆರಳಲು ಅನುಕೂಲವಾಗಲಿದೆ. ಯಲಗಿವಿ ಸುತ್ತಮುತ್ತಲಿನ ಗ್ರಾಮದ ಪ್ರಯಾಣಿಕರು ರೈಲು ನಿಲುಗಡೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಮುಖರಾದ ರುದ್ರಮುನಿ ಹಿರೇಮಠ, ನಿಂಗನಗೌಡ್ರ ಹೊಸಮನಿ, ಪರಸಪ್ಪ ಬಾಳಣ್ಣನವರ, ರವಿ ನಾಗಪ್ಪನವರ, ಚನ್ನಪ್ಪ ಚನ್ನೂರ, ರಘು ಕುರಗುಂದ, ಬಸವರಾಜ ಉಮಚಿ, ಚಂದ್ರಶೇಖರ ನಾಗಪ್ಪನವರ, ಶಿವಾನಂದ ಹಾವೇರಿ, ಬಸವರಾಜ ಸಂಕದಾಳ ಹಾಗೂ ಇತರರು ಪಾಲ್ಗೊಂಡಿದ್ದರು.