

ವಿಜಯಪುರ: ನಗರದ ಮನಗೂಳಿ ರಸ್ತೆಯಲ್ಲಿ ಶನಿವಾರ ಬೃಹತ್ ಮರ ಧರೆಗೆ ಉರುಳಿದೆ. ಮರಾಠಿ ವಿದ್ಯಾಲಯ ಸಮೀಪ ಮಸೀದಿ ಬಳಿ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದಾಗ ಬೇರು ಸಡಿಲುಗೊಂಡು ಏಕಾಏಕಿ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆ ಮೇಲೆ ಉರುಳಿದ ಮರದಿಂದಾಗಿ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಯಿತು.