ಬ್ರೈಡ್ಸ್ ಆ್ ಇಂಡಿಯಾ ಸೀಸನ್-9 ರ ಅಭಿಯಾನಕ್ಕೆ ಚಾಲನೆ

hn-27-3
Published on

ವಿಜಯಪುರ: ನಗರದ ಶಿವಾಜಿ ವೃತ್ತದ ಸಮೀಪ ಇರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಶೋರೂಂ ನಲ್ಲಿ 9ನೇ ಆವೃತ್ತಿಯ ‘ಬ್ರೈಡ್ಸ್ ಆಫ್ ಇಂಡಿಯಾ’ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಕಲಾವಿದೆಯರಾದ ದೀಕ್ಷಾ ಭೀಸೆ, ದಿವ್ಯಾ ಭೀಸೆ, ಅನುಪಮಾ ಅಲದಿ ಹಾಗೂ ಅರ್ಚನಾ ಅವರಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಜಗತ್ತಿನ ಅತಿದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಭಾರತ ವಿವಿಧ ಭಾಗಗಳಲ್ಲಿ 13 ವಧುಗಳ ಆಭರಣಗಳ ವಿನ್ಯಾಸವುಳ್ಳ ವಿವಾಹ ಗೀತೆ ವಿಡಿಯೋವನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.

ವ್ಯಾಪಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಎಂದೆಂದಿಗೂ ಬದ್ಧವಾಗಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ತನ್ನ ಗ್ರಾಹಕರಿಗೆ ಹಲವು ಭರವಸೆಗಳನ್ನು ನೀಡುತ್ತದೆ. ಬದ್ಧತೆಗಳಲ್ಲಿ ನಿಖರವಾದ ಉತ್ಪಾದನಾ ವೆಚ್ಚ , ಹರಳಿನ ತೂಕ, ನಿವ್ವಳ ತೂಕ ಮತ್ತು ಆಭರಣಗಳ ಹರಳಿನ ಶುಲ್ಕ, ಆಭರಣಗಳ ಜೀವಿತಾವಧಿಯ ನಿರ್ವಹಣೆ, ಹಳೆಯ ಚಿನ್ನದ ಆಭರಣಗಳ ಮರು ಮಾರಾಟ ಸಂದರ್ಭದಲ್ಲಿ ಚಿನ್ನಕ್ಕೆ ಶೇ.100 ರಷ್ಟು ವುಲ್ಯ ಮತ್ತು ವಿನಿಮಯ ಶೂನ್ಯ ಕಡಿತವನ್ನು ಸೂಚಿಸುವ ಪಾರದರ್ಶಕ ಬೆಲೆಯು ಸೇರಿದೆ. ಶೇ.100 ಚಿನ್ನದ ಶುದ್ಧತೆಯನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು ಮಲಬಾರ್ ಗೋಲ್ಡ್‌ನ ಶಾಖಾ ಮುಖ್ಯಸ್ಥ ಯುಸೂಫ್ ಅಲಿ ತಿಳಿಸಿದರು. ಮಾರ್ಕೆಟಿಂಗ್ ಮುಖ್ಯಸ್ಥರಾದ ಅಬ್ದುಲ್ ಅಜೀಜ್ ಖತೀಬ್, ಬಸವರಾಜ ಪೊಲೇಶಿ, ಮೇಘಾ ಆಸಂಗಿ, ಗ್ರಾಹಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net