

ವಿಜಯಪುರ: ಇಲ್ಲಿನ ಮಹೇಂದ್ರಗಿರಿಯಲ್ಲಿರುವ ಶ್ರೀ ಭಗವಾನ ಪಾರ್ಶ್ವನಾಥರ ಜಯಂತಿಯನ್ನು ಶನಿವಾರ ಸರಳವಾಗಿ ಆಚರಿಸಲಾಯಿತು. ಬೆಳಗ್ಗೆ 7.15 ಕ್ಕೆ ಜಲಾಭಿಷೇಕ, 7.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ 8.30ಕ್ಕೆ ಧರ್ಮಧ್ವಜಾರೋಹಣ ನಡೆಯಿತು. ಮುಖಂಡರಾದ ಪ್ರಕಾಶ ಗೊಂಗಡಿ ಮತ್ತು ಸಂಜೀವ ಹುಲ್ಲೊಳಿ ಧ್ವಜಾರೋಹಣ ನೆರವೇರಿಸಿದರು. ನಂತರ 9 ಗಂಟೆಗೆ ಪಾರ್ಶ್ವನಾಥರ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ತದನಂತರ ಬೃಹತ್ ಕಲಿಕುಂಡ ವಿಶೇಷ ಪೂಜೆ ನೆರವೇರಿತು. ಸಮಾಜದ ಮುಖಂಡರಾದ ಡಿ.ಆರ್. ಶಹಾ, ಶೈಲೇಶ ಶಹಾ, ಎಸ್.ಎಸ್. ಮಗದುಮ್, ಸುಭಾಷ ಬಾಗೇವಾಡಿ, ಸುಮಿತ್ರಾ ನಿಡಗುಂದಿ, ಶಾಲಿನಿ ಗೌಡರ ಇನ್ನಿತರರು ಪಾಲ್ಗೊಂಡಿದ್ದರು.