ಗ್ರಾಮ ಸ್ವರಾಜ್ಯದ ಕನಸು ನನಸಾಗಲಿ

Gram Bharat
Published on

ವಿಜಯಪುರ: ಜಗತ್ತಿಗೆ ಸರಳತೆ ಹಾಗೂ ಅಹಿಂಸಾ ತತ್ವವನ್ನು ಪರಿಚಯಿಸಿದ ಶ್ರೇಷ್ಠ ವ್ಯಕ್ತಿ ಮಹಾತ್ಮ ಗಾಂಧಿ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಿ.ಬಿ.ಪಾಟೀಲ ಶೇಗುಣಸಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ಅವರು ಒಬ್ಬ ಸಜ್ಜನ ವ್ಯಕ್ತಿತ್ವ ಹೊಂದಿದವರಾಗಿದ್ದರು.ಅವರು ಕಂಡ ಗ್ರಾಮ ಸ್ವರಾಜ್ಯ ಕನಸು ನನಸು ಮಾಡಲು ನಾವೆಲ್ಲರೂ ಇಂದು ಸಂಕಲ್ಪ ಮಾಡಬೇಕಾಗಿದೆ. ಸ್ವದೇಶಿ ವಸ್ತುಗಳ ಬಳಕೆ ಹಾಗೂ ಖಾದಿ ಬಗೆಗಿನ ಅವರ ನಿಲುವು ನಾವೆಲ್ಲರೂ ಅರ್ಥ ಮಾಡಿಕೊಂಡು ಅವರ ಸರಳತೆಯನ್ನು ಮಕ್ಕಳಿಗೆ ಮೈಗೂಡಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡುವುದು ಅತ್ಯಂತ ಅಗತ್ಯವಾದ ಸಂಗತಿಯಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು. ಉಪನ್ಯಾಸಕ ಸತ್ಯಣ್ಣ ಹಡಪದ, ವ್ಯಾಪಾರಸ್ಥ ಗಂಗಾಧರ ಸಾಲಕ್ಕಿ, ಎಸ್.ಖಾದ್ರಿ ಇನಾಮದಾರ, ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ, ವಿದ್ಯಾ ಕೋಟೆನವರ, ಮಹಾದೇವಿ ತೆಲಗಿ, ಮಹಾದೇವ ರಾವಜಿ, ಶಂಕರಲಿಂಗ ಮಾಡಿಗಿ, ಶಿವಲಿಂಗ ಕಿಣಗಿ, ಡಾ. ಕಾಂತು ಇಂಡಿ, ಮಹಿಬೂಬ್ ಮಾಲಬಾವಡಿ, ಶಿವಾನಂದ ಸಂಗೊಳ್ಳಿ, ಎಂ.ಆರ್. ಕಬಾಡೆ, ಸೋಮಶೇಖರ ಕುರ್ಲೆ, ಸಿದ್ದಪ್ಪ ಬಿರಾದಾರ, ಕೆ.ಆರ್. ಗುಬ್ಬಣ್ಣವರ, ಜಯಶ್ರೀ ಮಣೂರ, ಲಕ್ಷ್ಮಿ ಬಾಯಿ ತೊರವಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net