ಮಧುರಚೆನ್ನರ ಸ್ಮಾರಕ ಸ್ಥಾಪಿಸಿ

HN 1-1
Published on

ವಿಜಯಪುರ: ಮಧುರಚೆನ್ನರು ಸರ್ವಧರ್ಮದವರೊಂದಿಗೆ ಕೂಡಿ ಹಲಸಂಗಿ ಗೆಳೆಯರ ಬಳಗ ಹುಟ್ಟು ಹಾಕಿದ್ದರು. ಅಂತಹ ಮಹಾನ್ ಕವಿ ಮಧುರಚೆನ್ನರ ಹೆಸರನ್ನು ನಗರದ ಒಂದು ಬಡಾವಣೆಗೆ ಇಡಬೇಕು ಮತ್ತು ರಸ್ತೆಯೊಂದಕ್ಕೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ಇಲ್ಲಿನ ವಿವೇಕನಗರದಲ್ಲಿರುವ ಮಧುರಚೆನ್ನ ನಿವಾಸದಲ್ಲಿ ಭೃಂಗಿಮಠ ಕಾನೂನು ಕ್ರಿಯಾತ್ಮಕ ವೇದಿಕೆ ಹಾಗೂ ಕರ್ನಾಟಕ ಪಬ್ಲಿಕ್ ಪವರ್ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಧುರಚೆನ್ನರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುರಚೆನ್ನರ ಭಾವೈಕ್ಯತೆಯ ಪ್ರೀತಿ, ವಿಶ್ವಾಸ, ನಂಬಿಕೆ ಇಂದಿಗೂ ಆದರ್ಶವಾಗಿದೆ ಎಂದರು.
ಮಧುರಚೆನ್ನರ ಮೊಮ್ಮಗ ಜಗದೇವ ಸತ್ಯಕಾಮ ಗಲಗಲಿ ಮಾತನಾಡಿ, ಮಧುರಚೆನ್ನ ಎನ್ನುವ ಹೆಸರು ವ್ಯಕ್ತಿ ಸೂಚಕವಲ್ಲ. ಅದು ಕಾವ್ಯ ನಾಮ. ಈ ಕಾವ್ಯನಾಮದ ಹಿಂದೆ ಸ್ನೇಹದ ನೆನಪಿದೆ. ಮಧುರ ಎನ್ನುವ ಅನ್ಯ ಜಾತಿಯ ಅವರ ಗೆಳೆಯನ ಹೆಸರು. ಮುಂದೆ ತನ್ನ ಹೆಸರಿನ ಚೆನ್ನ ಸೇರಿಸಿ ಮಧುರಚೆನ್ನ ಎಂದು ಕಾವ್ಯನಾಮ ಇಟ್ಟುಕೊಂಡು ಚನ್ನಮಲ್ಲಪ್ಪ ಸಿದ್ದಲಿಂಗಪ್ಪ ಗಲಗಲಿ ಹೆಸರು ಬದಲು ಮಧುರಚೆನ್ನ ಎಂಬ ಹೆಸರಿನಿಂದ ಗುರುತಿಸಿಕೊಂಡರು ಎಂದು ಸ್ಮರಿಸಿದರು.

ಕರ್ನಾಟಕ ಪಬ್ಲಿಕ್ ಪವರ್ ಸಂಘಟನೆ ಮುಖಂಡ ಪ್ರಕಾಶ ಕುಂಬಾರ, ಇತಿಹಾಸಕಾರ ಡಾ.ಆನಂದ ಕುಲಕರ್ಣಿ, ಯಾಜ್ ಕಲಾದಗಿ, ಕವಿತಾ ಹಿರೇಮಠ, ರವಿ ಕಿತ್ತೂರ, ಸಾಯಬಣ್ಣ ಮಡಿವಾಳರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net