ಲಾರಿ ಕಳ್ಳತನ ಆರೋಪಿ ಬಂಧನ

Arrest
Published on

ವಿಜಯಪುರ: ಸಕ್ಕರೆ ವೀಲ ತುಂಬಿದ ಲಾರಿ ಕಳ್ಳತನ ಮಾಡಿದ ಹೊಕ್ಕುಂಡಿ ಗ್ರಾಮದ ಉಮೇಶ ಶ್ರೀಶೈಲ ಟಕ್ಕಳಕಿ (21) ಯನ್ನು ವಿಜಯಪುರದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ವಿಜಯಪುರ ನಗರದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ 400 ಚೀಲ ಸಕ್ಕರೆ ತುಂಬಿದ್ದ ಲಾರಿಯನ್ನು ಪರಿಶೀಲನೆ ನಡೆಸಿದಾಗ ಕಳವು ಮಾಡಿಕೊಂಡು ಹೊರಟಿದ್ದ ಬಗ್ಗೆ ಮಾಹಿತಿ ತಿಳಿದಿದೆ. ಕಳ್ಳನ ಬೆನ್ನತ್ತಿದ್ದ ಪೊಲೀಸರ ತಂಡ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಸಮೀಪ ಸೀಮಿಕೇರಿ ಗ್ರಾಮದ ಹತ್ತಿರ ಲಾರಿ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. 50 ಕೆಜಿ ತೂಕದ 400 ಚೀಲ ಸಕ್ಕರೆ, ಲಾರಿ, ಬೈಕ್ ಸೇರಿದಂತೆ ಒಟ್ಟು 20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಎಸ್‌ಪಿ ಪ್ರಕಾಶ ನಿಕ್ಕಂ ಮಾರ್ಗದರ್ಶನದಲ್ಲಿ ಎಎಸ್‌ಪಿ ಲಕ್ಷ್ಮಿ ನಾರಾಯಣ ನೇತೃತ್ವದಲ್ಲಿ ಸಿಪಿಐ ಟಿ.ಬಿ.ನೀಲಗಾರ, ಪಿಎಸ್‌ಐ ಎಸ್.ಬಿ.ಆಜೂರ, ಸಿಬ್ಬಂದಿಗಳಾದ ಎಸ್.ಎಸ್.ಮಾಳೇಗಾಂವ, ಎಸ್.ಬಿ.ತಿಪ್ಪಣ್ಣವರ, ವೈ.ಪಿ.ಕಬಾಡೆ, ಎಸ್.ಪಿ.ಲೋಗಾವಿ, ಸಂಜು ಬನಪಟ್ಟಿ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net