

ವಿಜಯಪುರ: ಜಮೀನುಗಳಿಗೆ ಹೋಗಲು ದಾರಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ರೈತ ಮುಖಂಡರು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಸಿ ಕಲಾದಗಿ ಮಾತನಾಡಿ, ಹೊನಗನಹಳ್ಳಿ ಗ್ರಾಮದ ಜಮೀನುಗಳಿಗೆ ಹೋಗಲು ಎತ್ತಿನ ಗಾಡಿ, ಇನ್ನಿತರ ವಾಹನಗಳಿಗೆ ರಸ್ತೆ ವ್ಯವಸ್ಥೆ ಇಲ್ಲದೆ ರೈತರು ಪರದಾಡುವಂತಾಗಿದೆ. ಅನುಕೂಲಕ್ಕೆ ತಕ್ಕಂತೆ ಹೊಲಗಳಿಗೆ ಬೆಳೆ ಇಲ್ಲದೆ ಇರುವಾಗ ರೈತರು ಹಾದು ಹೋಗುತ್ತಿದ್ದರು. ಆದರೆ, ಈಗ ಹೊಲದಲ್ಲಿ ವಾಣಿಜ್ಯ ಬೆಳೆಗಳನ್ನು ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು ಅದರಿಂದ ಜಮೀನಿನಲ್ಲಿ ಹಾದುಹೋಗಲು ಅನಾನುಕೂಲವಾಗುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹೊಲಗಳಿಗೆ ಹೋಗಲು ದಾರಿ ವ್ಯವಸ್ಥೆ ಮಾಡಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಸಿದ್ದಪ್ಪ ವಾಲಿಕಾರ, ರಾಮಪ್ಪ ಕರಿಗಾರ, ರೇಣುಕಾ ಬಿರಾದಾರ, ವಿವೇಕಾನಂದ ಬಿರಾದಾರ, ಸುರೇಖಾ ಬಿರಾದಾರ, ನರಸಿಂಗ ಜಗದಾಳೆ, ಸಿದ್ದಪ್ಪ ಬಿರಾದಾರ, ಗಂಗಾಧರ ಬಿರಾದಾರ, ರೇಣುಕಾ ಬಿರಾದಾರ, ಮಲ್ಲಪ್ಪ ಹೊಸಟ್ಟಿ, ಬಸಪ್ಪ ಅಂಕಲಗಿ, ರಾಮಣ್ಣ ಸೀತಿಮನಿ, ಶಂಕರಗೌಡ ಬಿರಾದಾರ, ಶರಣಗೌಡ ಬಿರಾದಾರ ಮತ್ತಿತರರಿದ್ದರು.