ಚಾಕುವಿನಿಂದ ಇರಿದು ಯುವಕನ ಹತ್ಯೆ

Murder
Published on

ವಿಜಯಪುರ: ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದನ್ನು ಮಗ ಪ್ರಶ್ನಿಸಿದ್ದಕ್ಕೆ ಆತನನ್ನು ಮಟನ್ ಕತ್ತರಿಸುವ ಹರಿತವಾದ ಚಾಕುವಿನಿಂದ ತಿವಿದು ಹತ್ಯೆಗೈದ ಘಟನೆ ತಾಲೂಕಿನ ಖತಿಜಾಪುರದಲ್ಲಿ ನಡೆದಿದೆ.

ಖತಿಜಾಪುರ ನಿವಾಸಿ ಇಸ್ಮಾಯಿಲ್ ಮುಲ್ಲಾ (22) ಕೊಲೆಯಾದ ಯುವಕ. ಖಾಜಲ್ ಬೇಪಾರಿ ಕೊಲೆಗೈದ ಆರೋಪಿ. ಇಸ್ಮಾಯಿಲ್ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಇಸ್ಮಾಯಿಲ್ನನ್ನು ಹತ್ಯೆ ಮಾಡಿದ್ದಾನೆ.

ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಕೊಲೆಗಾರ ಖಾಜಲ್ನ ಮೇಲೆ ಹಲ್ಲೆ ಮಾಡಿದ್ದು, ಸ್ಥಳದಲ್ಲಿದ್ದ ಪೊಲೀಸರು ಆರೋಪಿಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಆನಂದ ಠಕ್ಕಣವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net