ವಿಜಯಪುರ: ಕಾರ್ತಿಕ ಏಕಾದಶಿ ಆಚರಣೆ

Photo-1 Vithoba temple
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿರುವ ಶ್ರೀ ವಿಠ್ಠಲ-ರುಕ್ಮಾಯಿ ಮಂದಿರದಲ್ಲಿ ಕಾರ್ತಿಕ ಏಕಾದಶಿ ಪ್ರಯುಕ್ತ ಮೂರ್ತಿಗಳಿಗೆ ವೇದಮೂರ್ತಿ ಶ್ರೀರುಕ್ಮಾಂಗದ ಭಟ್ ಅವರೊಂದಿಗೆ ಗಣಪತಿಭಟ್ ಜೋಶಿ ಅಭಿಷೇಕ ಮಾಡಿದರು
Published on

ವಿಜಯಪುರ: ಇಲ್ಲಿನ ಸಮೀಪದ ಜುಮನಾಳ ಗ್ರಾಮದಲ್ಲಿರುವ ವಿಠ್ಠಲ-ರುಕ್ಮಾಯಿ ಮಂದಿರದಲ್ಲಿ ಕಾರ್ತಿಕ ಏಕಾದಶಿ ಪ್ರಯುಕ್ತ ಶುಕ್ರವಾರ ವಿಶೇಷ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ವೇದಮೂರ್ತಿ ಶ್ರೀ ರುಕ್ಮಾಂಗದ ಭಟ್ ಅವರೊಂದಿಗೆ ಗಣಪತಿಭಟ್ ಜೋಶಿ ಅಭಿಷೇಕ ಮಾಡಿದರು. ಭಕ್ತರು ದೇವಾಲಯಕ್ಕೆ ಬಂದು ಅಲಂಕೃತ ವಿಠೋಬಾ-ರುಕ್ಮಾಯಿಯ ದರ್ಶನ ಪಡೆದರು. ಅದಕ್ಕೂ ಮುಂಚೆ ಶ್ರೀ ಭಗವದ್ಗೀತಾ ಮಂಡಳಿಯ ಸದಸ್ಯರು ಸುಮಾರು ಒಂದು ಗಂಟೆಗಳ ಕಾಲ ಭಗವದ್ಗೀತೆಯನ್ನು ಪಠಿಸಿದರು.

ಸಂಜೆವರೆಗೆ ಸಹಸ್ರಾರು ಭಕ್ತರು ಆಗಮಿಸಿ ವಿಠ್ಠಲನ ದರ್ಶನ ಪಡೆದು ಪುನೀತರಾದರು. ಮಹಿಳೆಯರು ಸಂಗೀತ ವಾದ್ಯಗಳಿಂದೊಡಗೂಡಿ ಸಂಗೀತ ಸೇವೆ ಮಾಡಿದರು.
ಆಗಮಿಸಿದ ಭಕ್ತಮಂಡಳಿಗೆಲ್ಲ ದೇವಾಲಯದ ಧರ್ಮದರ್ಶಿ ಕಿರಣಭಟ್ಟ ಜೋಶಿ(ಜುಮನಾಳಕರ) ಪರಿವಾರದವರು ಲಾಹಾರದ ವ್ಯವಸ್ಥೆ ಮಾಡಿದ್ದರು.

ಅರವಿಂದ ಜೋಶಿ, ವಿಲಾಸ ಜೋಶಿ, ಗಣಪತಿ ಜೋಶಿ, ಅಶೋಕ ದಿಕ್ಷಿತ, ಶಂಭು ಭಟ್ಟ ಜೋಶಿ, ಶಾಮಭಟ್ಟ ಜೋಶಿ, ಕಾರ್ತಿಕ ಜೋಶಿ, ಅರುಣ ಸೋಲಾಪುರಕರ, ಎಂ.ಜಿ.ಕುಲಕರ್ಣಿ, ಹಣಮಂತ ಗುಡಿ, ಅಶೋಕ ಪದಕಿ, ರಾಘು ಕುಲಕರ್ಣಿ(ಗಿರಗಾಂವಿ), ಹರ್ಷಿತ ಗುಡಿ, ಶಂಕರ ಕುಲಕರ್ಣಿ( ಗಿರಗಾಂವಿ) ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net