

ವಿಜಯಪುರ: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆ ಜನರಲ್ಲಿ ಜಾಗೃತಿ ಹಾಗೂ ಪ್ರೇರಣೆ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಜ್ಯೋತಿ ರಥ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ತಿಳಿಸಿದ್ದಾರೆ.
ಜ್ಯೋತಿ ರಥವು ಅ. 8 ರಂದು ಬೆಳಗ್ಗೆ 9ಕ್ಕೆ ನಿಡಗುಂದಿ ಪಟ್ಟಣಕ್ಕೆ ಆಗಮಿಸುವ ಜ್ಯೋತಿ ರಥಕ್ಕೆ ಸಚಿವ ಶಿವಾನಂದ ಪಾಟೀಲ ಜಿಲ್ಲೆಗೆ ಬರಮಾಡಿಕೊಳ್ಳಲಿದ್ದಾರೆ. ಬೆಳಗೆ 11.45 ಕ್ಕೆ ಬಸವನಬಾಗೇವಾಡಿ ಮೆರವಣಿಗೆ ನಡೆಯಲಿದ್ದು, ಸಚಿವ ಶಿವಾನಂದ ಪಾಟೀಲ ಭಾಗವಹಿಸುವರು. ನಂತರ ರಥವು ಮಧ್ಯಾಹ್ನ 12.30ಕ್ಕೆ ಮನಗೂಳಿ, 3 ಕ್ಕೆ ಬಬಲೇಶ್ವರ ಪಟ್ಟಣ ಸಂಚರಿಸಿ ಸಂಜೆ 4.35 ಕ್ಕೆ ನಗರದ ಅಥಣಿ ರಸ್ತೆಯಲ್ಲಿನ ಇಟಗಿ ಪೆಟ್ರೋಲ್ ಬಂಕ್ ಬಳಿ ಆಗಮಿಸಲಿದೆ.
ಅ. 8 ರಂದು ಬೆಳಗ್ಗೆ 9 ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ವಿಪ ಸದಸ್ಯ ಸುನೀಲಗೌಡ ಪಾಟೀಲ ಹಾಗೂ ಶಾಸಕ ವಿಠಲ ಕಟಕದೊಂಡ ಮೆರವಣಿಗೆ ಚಾಲನೆ ನೀಡುವರು. ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ತ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 12 ಕ್ಕೆ ಇಂಡಿ ಪಟ್ಟಣದಲ್ಲಿ ನಡೆಯುವ ಜ್ಯೋತಿ ರಥಯಾತ್ರೆಗೆ ಶಾಸಕ ಯಶವಂತರಾಯಗೌಡ ಪಾಟೀಲ, ಮಧ್ಯಾಹ್ನ 3 ಕ್ಕೆ ದೇವರಹಿಪ್ಪರಗಿಯಲ್ಲಿ ಶಾಸಕ ರಾಜುಗೌಡ ಪಾಟೀಲ, ಸಂಜೆ 4.30 ಕ್ಕೆ ಸಿಂದಗಿ ಪಟ್ಟಣಕ್ಕೆ ಆಗಮಿಸುವ ಜ್ಯೋತಿ ರಥಕ್ಕೆ ಶಾಸಕ ಅಶೋಕ ಮನಗೂಳಿ ಸ್ವಾಗತಿಸಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಕನ್ನಡಾಭಿಮಾನಿಗಳು ಜ್ಯೋತಿ ರಥದ ಮೆರವಣಿಗೆಯನ್ನು ಯಶಸ್ವಿಗೊಳಿಸುವಂತೆ ಹಾಸಿಂಪೀರ ವಾಲಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.