ಕನಕದಾಸರು ಸಮಾನತೆ ಹರಿಕಾರರು

VMS 4-1
Published on

ವಿಜಯಪುರ: ವ್ಯಕ್ತಿಗೆ ಗುಣಮುಖ್ಯವೇ ಹೊರತು ಕುಲವಲ್ಲ ಎಂಬ ಸರ್ವಕಾಲಿಕ ಸಂದೇಶವನ್ನು ಸಾರಿದ ದಾಸಶ್ರೇಷ್ಠ ಕನಕದಾಸರು ಮನುಕುಲೋದ್ಧಾರಕರು ಎಂದು ಪ್ರಶಾಂತ ಬೆಣ್ಣಿಮುದ್ದಿ ಹೇಳಿದರು.

ಇಲ್ಲಿನ ವಜ್ರಹನುಮಾನ ನಗರದಲ್ಲಿ ಸೆಂಟ್ ಜೋಸ್ೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಸೆಂಟ್ ಜೋಸ್ೆ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಸ, ಧರ್ಮಗ್ರಂಥ ರಚನೆ ಕೇವಲ ಮೇಲ್ವರ್ಗದವರ ಸ್ವತ್ತೆಂಬ ಮಾತನ್ನು ಕನಕದಾಸರು 16ನೇ ಶತಮಾನದಲ್ಲೇ ಹುಸಿಗೊಳಿಸಿದರು ಎಂದರು.

ವಿಜಯಪುರ ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಎಂ.ಎ. ಗುಳೇದಗುಡ್ಡ ಮಾತನಾಡಿ, 16ನೇ ಶತಮಾನದಲ್ಲಿ ಬಾಳಿ ಬದುಕಿದ ಕಾಲಜ್ಞಾನಿ ಕನಕದಾಸರು ಸಮಾನತೆ ಹರಿಕಾರರು. ದಾಸಕೂಟದಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಎಂದು ಹೇಳಿದರು.

ಸೆಂಟ್ ಜೋಸ್ೆ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಅನಲೀಸಾ ಬಾಸ್ಕೊ, ಸಂಸ್ಥೆ ಅಧ್ಯಕ್ಷ ಶಾಜು ಜೋಸ್ೆ, ವನಮಾಲಾ ರಾಠೋಡ, ಮೌನೇಶ ಪತ್ತಾರ, ಜೆ.ಎಸ್. ಹಿರೇಮಠ, ಡಾ.ಮಾಧವ ಗುಡಿ, ಉಮಾ ಗುಡ್ಡದ, ವಾಸಂತಿ ದೇಶಪಾಂಡೆ, ವಿಜಯಾ ಲೋಕುರೆ, ರಾಜೇಶ್ವರಿ ಬಂಕೂರೆ, ಸಚಿನ್ ಡೋಣೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net