

ವಿಜಯಪುರ: ಇಂದಿನ ದಿನಮಾನಗಳಲ್ಲಿ ಶಿಕ್ಷಣ ಜತೆಗೆ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರು ಹೇಳಿದರು.
ಜುಮನಾಳ ಕ್ರಾಸ್ ಬಳಿ ಇರುವ ಪ್ರಾರ್ಥನಾ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಶಾಲೆಯ 7ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾರ್ಥನಾ ಶಿಕ್ಷಣ ಸಂಸ್ಥೆ ಬಡವ ಬಲ್ಲಿದನೆನ್ನದೆ ಸಮಾನವಾಗಿ ಜ್ಞಾನ ನೀಡುವುದಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಗೌರವಾಧ್ಯಕ್ಷ ಎಚ್.ಎಂ. ಸಾರವಾಡ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹಾಗೂ ಅದನ್ನು ಸಾಧಿಸುವ ಕುರಿತು ಲಕ್ಷೃ ವಹಿಸಬೇಕು ಎಂದು ಹೇಳಿದರು.
ಪಬ್ಲಿಕ್ ಶಾಲೆ ಪ್ರಾಂಶುಪಾಲ ಪ್ರಶಾಂತ ಎಲ್.ಎಚ್. ಸಂಸ್ಥೆಯ 7 ವರ್ಷಗಳ ಸಾಧನೆ ಕುರಿತು ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಬಿ.ಎಸ್. ಕಾಖಂಡಕಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಅನುರಾಧಾ ಎಚ್.ಎಸ್. ಆಗಮಿಸಿದ್ದರು.
ಪಿಯು ಕಾಲೇಜು ಪ್ರಾಚಾರ್ಯ ಚಂದ್ರಶೇಖರ, ಪಬ್ಲಿಕ್ ಶಾಲೆ ಉಪ ಪ್ರಾಚಾರ್ಯ ನಿರ್ಮಲಾ ಡಿ. ಮಾತನಾಡಿದರು.
ಪಿಯು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಸನ್ಮಾನಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಶಿಕ್ಷಕರಾದ ಚಾಂದ ನದಾಫ್, ಪವನ ಕುಲಕರ್ಣಿ, ಬಸವರಾಜ ಆಜೂರ, ದಾವೂದ್ ಆಲಗೂರ, ಅಂಜುಮ ಪಟೇಲ್, ಅಕ್ಷತಾ ಹಿರೇಮಠ, ಶ್ರೀನಿಧಿ ಲಿಂಗದಳ್ಳಿ, ರೇಣುಕಾ ತುಂಗಳ, ಹಸೀನಾ ಮುಲ್ಲಾ, ನಸೀಮಾ ಅತ್ತಾರ್, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.