ವಿಜಯಪುರ; ಜು. 11ರಂದು ಉದ್ಯೋಗಮೇಳ

job fair
Published on

ವಿಜಯಪುರ: ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಸಿಕ್ಯಾಬ್‌ನ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಜು. 11 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10ಕ್ಕೆ ಮೇಳಕ್ಕೆ ಚಾಲನೆ ದೊರಕಲಿದೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸಿಕ್ಯಾಬ್ ಸಂಸ್ಥೆಯ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಇವರ ಸಹಯೋಗದೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಗಳು ಹಾಗೂ ಸ್ಥಳೀಯ ಖಾಸಗಿ ಕಂಪನಿಗಳಿಂದ ನೇಮಕಾತಿಗಾಗಿ ಈ ಮೇಳ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ ಪಾಸಾದ 35ರ ವಯೋಮಾನದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಶಾಲಾ ದಾಖಲಾತಿಗಳ ಸಹಿತ ಸ್ವವಿವರ, ಆಧಾರ್ ಕಾರ್ಡ್‌ಗಳ ಎರಡು ಸೆಟ್ ನಕಲು ಪ್ರತಿಯೊಂದಿಗೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.7760944286 ಹಾಗೂ ಮೊ. 9945000793ಕ್ಕೆ ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net