

ವಿಜಯಪುರ: ನಗರದ ಜಿಲ್ಲಾ ಜಾತ್ಯತೀತ ಜನತಾದಳ ಕಚೇರಿಯಲ್ಲಿ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನಗರ ಘಟಕದ ಅಧ್ಯಕ್ಷರನ್ನಾಗಿ ರಾಜು ಹಿಪ್ಪರಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ವಕ್ತಾರರನ್ನಾಗಿ ಗೋವಿಂದ ಜೋಶಿ, ಕಚೇರಿ ಕಾರ್ಯದರ್ಶಿಯನ್ನಾಗಿ ಎಂ.ಆರ್. ಕಬಾಡೆ ವಿಜಯಪುರ ನಗರ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಹಿಬೂಬ ಭಕ್ಷಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಾಧ್ಯಕ್ಷ ದಿಲಾವರ್ ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ ಮಾತನಾಡಿದರು.
ಶಾಂತಪ್ಪಣ್ಣ ಜತ್ತಿ, ಹುಸೇನ್ ಬಾಗಾಯತ್, ಕೌಸರ್ ಶೇಖ, ಈರಣ್ಣ ಮೋಟಗಿ, ರೇಖಾ ಮಾಶ್ಯಾಳ, ಮಹಾದೇವಿ ತಳಕೇರಿ, ಸ್ನೇಹಾ ಶೆಟ್ಟಿ, ಎಸ್.ವೈ. ನಡುವಿನಕೇರಿ, ಯಾಕೂಬ್ ಕೋಪರ್, ಸೋಮು ಉಪ್ಪಾರ, ಐಜಾಜ್ ಮುಕ್ಬಿಲ್, ಸುಭಾಸ ನಾಯಕ, ವಾಜಿದ್ ಖಾಜಿ, ಜಾರ್ ಕಲಾದಗಿ ಮತ್ತಿತರರಿದ್ದರು.
ಜಿಲ್ಲಾ ವಕ್ತಾರರಾದ ಎಸ್.ಎಸ್. ಖಾದ್ರಿಇನಾಮದಾರ್ ಸ್ವಾಗತಿಸಿದರು. ಎಸ್ಸಿ/ ಎಸ್ಟಿ ಘಟಕದ ಅಧ್ಯಕ್ಷ ಸಿದ್ದು ಕಾಮತ ವಂದಿಸಿದರು.