ಆಧ್ಯಾತ್ಮಿಕರ ಜನ್ಮಭೂಮಿ ವಿಜಯಪುರ

20220926_062142 (1)
ವಿಜಯಪುರ ನಗರದ ಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ನಡೆದ ಪ್ರವಚನ ಕಾರ್ಯಕ್ರಮವನ್ನು ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಆಶ್ರಮದ ಮುಖ್ಯಸ್ಥ ಶ್ರೀ ಬಸವಲಿಂಗ ಸ್ವಾಮೀಜಿ, ಬಾಲಗಾಂವದ ಡಾ. ಅಮೃತಾನಂದ ಸ್ವಾಮೀಜಿ ಇದ್ದಾರೆ.
Published on

ವಿಜಯಪುರ: ಜಗಜ್ಯೋತಿ ಬಸವಣ್ಣನ ನಾಡಿನಲ್ಲಿ ಆಧ್ಯಾತ್ಮಿಕರ ಚಿಂತನೆಯ ಜ್ಯೋತಿ ಬೆಳಗಿಸಿದ ಗುರು ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ ಎಂದು ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಿದ್ದೇಶ್ವರ ಸ್ವಾಮೀಜಿ ಅವರ ನಡೆ-ನುಡಿಗಳ ಬಗ್ಗೆ ಬಾಲ್ಯದ ವಿದ್ಯಾರ್ಥಿಯ ಜೀವನದ ಆಶ್ರಮದ ಒಡನಾಟವನ್ನು ಮೆಲಕು ಹಾಕಿದರು. ಬಬಲೇಶ್ವರ ಶ್ರೀ ಮಠಕ್ಕೆ ಪೂಜ್ಯರಾಗಲು ಹಾಗೂ ನನ್ನೆಲ್ಲ ಬೆಳವಣಿಗೆಗೆ ಆಶ್ರಮದ ಗುರುಗಳ ಆಶೀರ್ವಾದ ಇದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಶ್ರಮದ ಮುಖ್ಯಸ್ಥ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಹಬ್ಬದ ವಾತಾವರಣದಲ್ಲಿ ಶ್ರೀಗಳ ಪ್ರವಚನ ಆರಂಭ ಆಗಿರುವುದು ನಮಗೆಲ್ಲ ಸಂತೋಷಕರ ಮತ್ತು ಸೌಭಾಗ್ಯ ವಿಷಯವಾಗಿದೆ ಎಂದರು.

ಬಾಲಗಾಂವದ ಡಾ. ಅಮೃತಾನಂದ ಸ್ವಾಮೀಜಿ ಮಾತನಾಡಿ, ಎಲ್ಲ ಹಬ್ಬಗಳಲ್ಲಿ ದಸರಾ ಹಬ್ಬ ದೊಡ್ಡ ಹಬ್ಬ. ಈ ಹಬ್ಬವು ರೈತರ, ದುಡಿಮೆಗಾರರ ಎಲ್ಲರ ಹಬ್ಬವಾಗಿದೆ. ಈ ಹಬ್ಬದಲ್ಲಿ ಬೆಳಕು ಹಾಗೂ ಭೂಮಿತಾಯಿಗೆ ದುಡಿದಂತಹ ಅನೇಕ ಮಹಾತ್ಮರನ್ನು ನೆನೆಯುವ ಹಬ್ಬವಾಗಿದೆ . ಗುಳ್ಳವ್ವ, ಗಣೇಶ, ಮಣ್ಣೆತ್ತಿನ ಅಮಾವಾಸ್ಯೆ ಹೀಗೆ ಭೂಮಿತಾಯಿಯ ಮಣ್ಣಿನಿಂದ ಮೂರ್ತಿಯನ್ನು ತಯಾರು ಮಾಡಿಕೊಂಡು ಹಬ್ಬವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲ ಹಬ್ಬಗಳನ್ನು ನಗುನಗುತ್ತಾ ಆನಂದದಿಂದ ಆಚರಣೆ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net